ತುಕಾರಾಮ್

Author : ಎ.ಕೆ.ರಾಮೇಶ್ವರ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

`ತುಕಾರಾಮ್' ಸಾಧುಸಂತರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ಎ.ಕೆ. ರಾಮೇಶ್ವರ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ತನ್ನ ದೇವರು ವಿಠ್ಠಲನಿಗಾಗಿಯೇ ಬದುಕಿನ ಸಂತಶ್ರೇಷ್ಠ. ಎಲ್ಲ ಕಷ್ಟ ದೌರ್ಜನ್ಯಗಳನ್ನೂ ತಾಳ್ಮೆಯಿಂದ ಸಹಿಸಿದ, ಶಿವಾಜಿ ಮಹಾರಾಜನೇ ವಜ್ರ ವೈಡೂರ್ಯಗಳನ್ನು ಅರ್ಪಿಸಿದರೂ ಸ್ವೀಕರಿಸದ ಮಹಾನುಭಾವ. ಇವನ ಅಭಂಗಗಳು ಮರಾಠಿ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಎಂದು ತುಕಾರಾಮರ ಕುರಿತಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ತುಕಾರಾಮರ ಬಾಲ್ಯ ಜೀವನ, ಸರ್ವಸ್ವವನ್ನೂ ತ್ಯಜಿಸಿ, ಸನ್ಯಾಸಿ ಜೀವನ ತಳೆದ ಬಗೆ, ಮರಾಠಿ ಸಾಹಿತ್ಯಕ್ಕೆ ಅವರ ಕೊಡುಗೆ, ಸಾಹಿತ್ಯ ಲೋಕದತ್ತ ಆಸಕ್ತಿ ಹುಟ್ಟಿದ ಬಗೆ ಹೀಗೆ ತುಕಾರಾಮರ ಜೀವನದ ವಿವಿಧ ಆಯಾಮಗಳನ್ನು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ಎ.ಕೆ.ರಾಮೇಶ್ವರ
(02 May 1934)

ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ  ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.  ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು.  ...

READ MORE

Related Books