ತುಕ್ರನ ಕನಸು

Author : ಚಂದ್ರಶೇಖರ ಕಂಬಾರ

Pages 72

₹ 70.00




Year of Publication: 1989
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

'ತುಕ್ರನ ಕನಸು' ನ್ಯಾಯ ಮತ್ತು ಸಮಾನತೆಯುಳ್ಳ ವ್ಯವಸ್ಥೆಯ ಹುಡುಕಾಟ ಕುರಿತಾದದ್ದು. ತುಕ್ರನ ಮಾತಿನಲ್ಲೇ ಹೇಳುವುದಾದರೆ 'ಅವನು ಎಷ್ಟೋ ವರ್ಷಗಳಿಂದ ಈ ಭೂಮಿ ಕಂಡ ಕನಸು ಈ ಭೂಮಿ ಉಂಡ ನೋವು, ಈ ನೆಲಕ್ಕಾದ ಗಾಯ'. ಇಂಥ ಸ್ಥಿತಿಯಲ್ಲಿರುವ ತುಕ್ರ ಈ ಸ್ಥಿತಿಯನ್ನು ಮೀರಲು ನಡೆಸುವ ಪ್ರಯತ್ನ, ಹುಡುಕುವ ಸಾಧ್ಯತೆಗಳೇ ಈ ನಾಟಕದ ಕಥಾ ವಸ್ತು.

ಪಟೇಲ ಮತ್ತು ಶಾನಭೋಗರ ಕಾಲಕೋಶದಲ್ಲಿ ತನ್ನ ಹೆಸರು ಇರುವುದೆ ? ಎಂಬ ಸಂದೇಹ ತುಕ್ರನದು. ಟಗರಿನ ಕಾಳಗದಲ್ಲಿ ಗೆದ್ದಿರುವ ತುಕ್ರನ ಹಣವನ್ನೆಲ್ಲ ಜನರು ದೋಚಿದಾಗ ಹಂಚಲು ಇಟ್ಟುಕೊಂಡಿದ್ದ ಮೂರ್ಖತನವೆಲ್ಲ

ಹೊಯಿತೆಂದು ಖುಷಿಪಡುತ್ತಾನೆ. ಜೀವನದಲ್ಲಿ ಬೇಸತ್ತು ಸಾಯಲು ನಿರ್ಧರಿಸುವ ತುಕ್ರ ಅದಕ್ಕಾಗಿ ತನ್ನ ಗೋರಿಯನ್ನು ತಾನೇ ತೋಡಿಸುತ್ತಾನೆ. ಅದರಲ್ಲಿ ಇಳಿಯಬೇಕೆನ್ನುವಾಗಲೇ ಜೀವನದಲ್ಲಿ ನನಗೆ ಭಾರಿ ನಂಬಿಕೆ ಬಂದು ಬಿಟ್ಟಿದೆ ಎಂದು ಹೇಳುತ್ತ ಬೆಂಗಳೂರಿಗೆ ಹೋಗುತ್ತಾನೆ. ನಗರ ಜೀವನದ ಆಡಂಬರ ಮೈಗೂಡಿಸಿಕೊಂಡು ನಾಗರಿಕನಾಗಿ ಮರಳಿ ತುಕ್ರ ತನ್ನೂರಿಗೆ ಮರಳುತ್ತಾನೆ. ಸಾಂತನೆಂಬ ಕಳ್ಳನ ಜೊತೆಯಲ್ಲಿ ಸೇರಿ ಪಟೇಲನ ಮನೆ ದೋಚಲು ಯೋಜನೆ ರೂಪಿಸುತ್ತಾನೆ. ತುಕ್ರ ಕನಸಿನಲ್ಲಿ ಭಾರತಾಂಬೆಯನ್ನು ರಕ್ಷಿಸುವುದು, ಪಟೇಲನನ್ನು ಶಿಕ್ಷಿಸುವುದು, ತಾರಾ ಮೇಡಂಳನ್ನು ಪ್ರೀತಿಸುವುದು ಎಂಬಂತೆ ಕನಸು ಕಾಣುತ್ತಾನೆ. ಸಾಂತನ ಗುಂಪು ತುಕ್ರನಿಗೆ ಗೊತ್ತಾಗದ ಹಾಗೆ, ಪಟೇಲನ ಮನೆ ದರೋಡೆ ಮಾಡುತ್ತದೆ. ಮಲಗಿ ಕನಸು ಕಾಣುತ್ತಿರುವ ತುಕ್ರನನ್ನು ಬಂಧಿಸಿ ಗಲ್ಲಿಗೇರಿಸುವುದರೊಂದಿಗೆ ನಾಟಕ ಮುಗಿಯುತ್ತದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books