ತುಳುನಾಡಿನ ಮೂರಿಗಳ ಆರಾಧನೆ

Author : ರಾಜಶ್ರೀ ಟಿ ರೈ ಪೆರ್ಲ

Pages 176

₹ 250.00




Published by: ಪ್ರಸಾರಂಗ ಮಂಗಳೂರು ವಿಶ್ವವಿದ್ಯಾನಿಲಯ

Synopsys

ಲೇಖಕಿ ರಾಜಶ್ರೀ ಟಿ ರೈ ಪೆರ್ಲ ಅವರ ಕೃತಿ ‘ತುಳುನಾಡಿನ ಮೂರಿಗಳ ಆರಾಧನೆ -ಸಂಶೋಧನಾ ಗ್ರಂಥ’. ಈ ಕೃತಿಯಲ್ಲಿ ಪಿ.ಎಸ್. ಯಡಪಡಿತ್ತಾಯ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕರಾವಳಿ ಪ್ರದೇಶದ ಆದರಲ್ಲೂ ತುಳು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಅವುಗಳ ನಡುವೆಯೂ ಇನ್ನಷ್ಟು ಹೊಸ ವಿಷಯಗಳು ಸಂಶೋಧಕರನ್ನು ಸೆಳೆಯುತ್ತಿವೆ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಮೂರಿಗಳ ಆಚರಣೆ, ಅವುಗಳ ಆರಾಧನಾ ಕೇಂದ್ರಗಳು, ಪಾಡ್ಡನಗಳ ಸಂಗ್ರಹ ಮತ್ತು ಕನ್ನಡಾನುವಾದ, ಮೂಲಯ ಕುರಿತಾದ ಕಥನಗಳನ್ನು ಸಂಶೋಧನಾ ಶಿಸ್ತಿನಿಂದ ಮುಂಡಿಸಿರುವ ಈ ಕೃತಿ ಕರಾವಳಿಯಲ್ಲಿ ಹೊಸ ಸಂಶೋಧನೆಗಳನ್ನು ಬೆಳೆಸುವುದಕ್ಕೆ ಯೋಗವಾಗುವ ಹಲವು ವಿಚಾರಗಳನ್ನು ಹೊಂದಿದೆ. ತುಳುವಿನ ಜನಪ್ರಿಯ ಸಾಹಿತಿ ಯಾಗಿರುವ, ಗೃಹಿಣಿಯಾಗಿದ್ದುಕೊಂಡು ಇಂತಹ ಸಂಶೋಧನಾ ಪ್ರೀತಿಯ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಜಶ್ರೀ  ರೈ ಪೆರ್ಲ ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

About the Author

ರಾಜಶ್ರೀ ಟಿ ರೈ ಪೆರ್ಲ
(30 January 1979)

ಗಡಿನಾಡು ಕಾಸರಗೋಡಿನ ತುಳು, ಕನ್ನಡ, ಹವ್ಯಕ ಭಾಷೆಯ ಯುವ ಲೇಖಕಿ. ಇತ್ತೀಚೆಗಷ್ಟೇ ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಬಿಡುಗಡೆ ಕಂಡಿದೆ. ತುಳು ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿಗಾರ್ತಿಯಾಗಿ ಚಿರಪರಿಚಿತೆ. ತುಳುವಿನಲ್ಲಿ ನಾಲ್ಕು ಕಾದಂಬರಿಗಳು(ಪನಿಯಾರ, ಬಜಿಲಜ್ಜೆ, ಕೊಂಬು,ಚೌಕಿ) ,ಒಂದು ಕಥಾಸಂಕಲನ(ಚವಳೊ) ಮತ್ತು ಒಂದು ಕವನ ಸಂಕಲನ(ಮಮಿನದೊ-ಆಕೃತಿ ಆಶಯ ಪ್ರಕಾಶನ ಮಂಗಳೂರು ) ಪ್ರಕಟಿತ. ಕನ್ನಡದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಪ್ರಾದೇಶಿಕ ಅಧ್ಯಯನ ಕೃತಿ(ಕಲ್ಪತರು) ಪ್ರಕಟಿತ. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳ ಸಂಕಲನ ಅಗ್ಗಿಷ್ಟಿಕೆ(ಕಲ್ಪವೃಕ್ಷ ಪ್ರಕಾಶನ ಬೆಂಗಳೂರು) ಚೊಚ್ಚಲ ಕನ್ನಡ ಕಥಾಸಂಕಲನವಾಗಿದೆ. ...

READ MORE

Related Books