ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ

Author : ಡಾ.ಡಿ.ಎನ್. ಯೋಗೀಶ್ವರಪ್ಪ

₹ 0.00




Year of Publication: ೨೦೨೨
Published by: ಪ್ರಿಯದರ್ಶಿನಿ ಪ್ರಕಾಶನ
Address: ಪ್ರಿಯದರ್ಶಿನಿ ಪ್ರಕಾಶನ. ನಂ. 138,7ನೇ “ಸಿ” ಮುಖ್ಯರಸ್ತೆ. ಆರ್. ಪಿ. ಸಿ. ಲೇಔಟ್, ಹಂಪಿನಗರ. ವಿಜಯನಗರ ಎರಡನೇ ಹಂತ. ಬೆಂಗಳೂರು- 560104
Phone: 9448680920

Synopsys

ಡಾ. ಡಿ. ಎನ್. ಯೋಗೀಶ್ವರಪ್ಪ ನವರು ನಾಡಿನ ಇತಿಹಾಸ ಸಂಶೋಧಕರಲ್ಲಿ ಒಬ್ಬರು. ತುಮಕೂರು ಜಿಲ್ಲೆಗೆ ಸಂಬಂಧಪಟ್ಟ ಬಹಳಷ್ಟು ಸಂಶೋಧನಾತ್ಮಕವಾದ ಲೇಖನಗಳು, ಕೃತಿಗಳನ್ನು ಕೊಟ್ಟಿರುವುದು ಇವರ ವಿಶೇಷತೆ. ಯಾವುದೇ ಒಂದು ವಿಷಯವನ್ನು ತೆಗೆದು ಕೊಂಡರೆ, ಇತಿಹಾಸಕ್ಕೆ ಸಂಬಂಧ ಪಟ್ಟ ಅನುಮಾನಗಳು ಬಂದರೆ ಅದನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಅದಕ್ಕೆ ನಿಖರವಾದ ಮಾಹಿತಿ ಯೊಂದಿಗೆ ಪುನರ್ ಸ್ಥಾಪಿಸುವಂತಹ ಅಧ್ಯಯನಶೀಲತೆ ಇವರದು. ಇವರು ಕೃತಿ ‘ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ’ ಒಂದು ಜಿಲ್ಲೆಯ ಬಗ್ಗೆ ಸಾಹಿತ್ಯದ ಪೂರ್ಣ ಮಾಹಿತಿ ಸಂಗ್ರಹ ಇದರಲ್ಲಿದೆ. ಎಲ್ಲಾ ಕಾಲಕ್ಕೂ ಉಳಿಯುವಂತ ಮೌಲ್ಯಯುತವಾದ ಕೃತಿ. ಆಕರ್ಷಕವಾದ ಮುಖಪುಟ , ವಿನ್ಯಾಸ ಹೊಂದಿದ್ದು. ಜಿಲ್ಲೆಯ ೧೦ ತಾಲ್ಲೂಕಿನ ಸಾಹಿತ್ಯ ಕ್ಷೇತ್ರದ ಪೂರ್ಣ ವಿವರಗಳು ಇದರಲ್ಲಿದೆ.ಪರಿವಿಡಿಯಲ್ಲಿ ಸಾಹಿತ್ಯ ಪರಂಪರೆ, ಗ್ರಂಥ ಸಾಹಿತ್ಯ, ತಾಲ್ಲೂಕ್ ವಾರು ಸಾಹಿತ್ಯ ಪರಿಚಯ, ಸಾಹಿತ್ಯ ವೈಶಿಷ್ಟ್ಯತೆಯಲ್ಲಿ ಭಾಗ೧ಭಾಗ೨ಸಮಾರೋಪ,ಅನುಬಂಧಗಳನ್ನು ಒಳಗೊಂಡಿದೆ. ೧೮೦೦ರಿಂದ೧೯೪೭ ರ ವರೆಗಿನ ಕಾಲಘಟ್ಟವನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಪರಿಚಯಕ್ಕಷ್ಟೇ ಕೃತಿ ಮೀಸಲಾಗಿರದೆ, ಕ್ರಮಬದ್ದವಾದ ಅಧ್ಯಯನದ ದಾಖಲಾತಿ ಇಲ್ಲಿ ವಿಶೇಷವಾಗಿದೆ. ಕವಿಯ ಹೆಸರು ಕೃತಿ ಕಾಲ ಮನೆತನ, ಸ್ಥಳ, ಶಾಸನಗಳು ಶಿಲೆ, ತಾಮ್ರವನ್ನು ಕುರಿತು. ಕೋಷ್ಠಕಗಳು. ಹೀಗೆ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು , ಶಿಸ್ತುಬದ್ದವಾಗಿ ರಚಿಸಿದ್ದಾರೆ. ಬಹಳ ತಾಳ್ಮೆ, ಪರಿಶ್ರಮದಿಂದ ಮಾಡಿದ ಕೆಲಸ. ವಿವೇಚನಾಯುಕ್ತವಾದ ವಿಶ್ಲೇಷಣೆ, ವಿಷಯ ಸಂಗ್ರಹ ದಿಂದ ತುಮಕೂರು ಜಿಲ್ಲೆಯ ಸಾಹಿತ್ಯ ಚರಿತ್ರೆಗೆ ಕೊಟ್ಟ ಅಪೂರ್ವ ಕಾಣಿಕೆ ಎನ್ನಬಹುದು.

Related Books