ತುಂಬೆ ಹೂ

Author : ಸಂಧ್ಯಾರಾಣಿ

Pages 248

₹ 300.00




Year of Publication: 2017
Published by: ಎಸ್.ಎಸ್.ಆರ್.ಪಿ ಪಬ್ಲಿಕೇಷನ್ಸ್
Address: #523, 2ನೇ ಪ್ಲೋರ್, 24ನೇ ಮುಖ್ಯರಸ್ತೆ, ಸೆಕ್ಟರ್ 2, ಹೆಚ್.ಎಸ್.ಆರ್. ಲೇಔಟ್, ಬೆಂಗಳೂರು- 560102
Phone: 9880223444

Synopsys

‘ತುಂಬೆ ಹೂ’- ಡಾ. ಜಿ.ಎನ್. ನಾರಾಯಣ ರೆಡ್ಡಿ ಅವರ ಜೀವನ ಚರಿತ್ರೆ. ಲೇಖಕಿ ಎನ್. ಸಂಧ್ಯಾರಾಣಿ ಅವರು ಈ ಕೃತಿಯನ್ನು ನಿರೂಪಿಸಿದ್ದಾರೆ. ಡಾ. ರೆಡ್ಡಿ ಅವರ ಜೀವನದ ಹರವು ತುಂಬಾ ವಿಶಾಲ. ಹಲವು ಆಯಾಮಗಳನ್ನು ಒಳಗೊಂಡಿರುವುದೂ ಆಗಿದೆ. ಈ ಪುಸ್ತಕದಲ್ಲಿ ಡಾ. ರೆಡ್ಡಿ ಅವರ ಜೀವನವನ್ನು ನಾಲ್ಕು ಆಯಾಮಗಳಲ್ಲಿ ಕಟ್ಟಿಕೊಡುವ ಪ್ರಯತ್ನವಿದೆ. ಮೊದಲನೆಯದು ಅವರ ಬಾಲ್ಯಕ್ಕೆ ಸಂಬಂಧಿಸಿದ್ದು ಎರಡನೆಯದು ಅವರು ವಿದ್ಯಾಭ್ಯಾಸದ ನೆಲೆ, ಮೂರನೆಯದು ಅವರ ವೃತ್ತಿ ಬದುಕಿನ ವಿವರಗಳನ್ನು ಒಳಗೊಂಡಿರುವುದು ಮತ್ತು ಕೊನೆಯದು ಅವರ ಆಧ್ಯಾತ್ಮ ಶೋಧ ನೆಲೆಯನ್ನು ಒಳಗೊಂಡಿದೆ. ಈ ಕೃತಿಗೆ ಚಿಂತಕ, ಲೇಖಕ ಡಾ. ಕೆ.ವೈ. ನಾರಾಯಣಸ್ವಾಮಿಯವರು ಬೆನ್ನುಡಿ ಬರೆದಿದ್ದಾರೆ. ಪ್ರತಿಯೊಂದು ದೇಶದ ಪ್ರಗತಿಯನ್ನು ಆ ದೇಶದ ಶಾಲೆ ಮತ್ತು ವೈದ್ಯಕೀಯ ಸೇವೆಗಳ ಆಧಾರದ ಮೇಲೆ ಅಳೆಯಬಹುದಾಗಿದೆ. ನಿಮ್ಹಾನ್ಸ್ ನಲ್ಲಿ ಡಾ. ರೆಡ್ಡಿ ಅವರ ಒಂದು ಕಣ್ಣು ವೈದ್ಯಕೀಯ ಚಿಕಿತ್ಸೆಗಳನ್ನು ಆಧುನೀಕರಣಗೊಳಿಸುವತ್ತ ನೆಟ್ಟಿದ್ದರೆ ಇನ್ನೊಂದು ಕಣ್ಣು ರೋಗಿಗಳು ಮತ್ತು ವೈದ್ಯಕೀಯ ಸೇವೆಯನ್ನು ಮಾನವೀಯಗೊಳಿಸುವತ್ತ ನೆಟ್ಟಿರುತ್ತಿತ್ತು. ಆಸ್ಪತ್ರೆಗೆ ಬರುವ ರೋಗಿಗಳು ಮಾತ್ರವಲ್ಲ ಅವರ ಕುಟುಂಬಗಳು ಅವರ ಸಂಕಷ್ಟಗಳು ಡಾ. ರೆಡ್ಡಿ ಅವರ ಅಂತಃಕರಣವನ್ನು ಕರಗಿಸಿ ಬಿಡುತ್ತಿದ್ದವು. ಡಾ.ರೆಡ್ಡಿ ಅವರು ನಿಜ ಅರ್ಥದಲ್ಲಿ ಒಬ್ಬ ಲೀಡರ್ ವಿತ್ ವಿಷನ್ ಎನ್ನುತ್ತಾರೆ ಕೆ.ವೈ. ನಾರಾಯಣಸ್ವಾಮಿ. ಡಾ. ರೆಡ್ಡಿಯವರ ಬದುಕನ್ನು ಮತ್ತೊಂದು ರೀತಿಯಲ್ಲಿ ಅನಾವರಣಗೊಳಿಸುವ ಕೃತಿ ಇದು.

About the Author

ಸಂಧ್ಯಾರಾಣಿ

ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ  (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...

READ MORE

Related Books