ತುಂಗಭದ್ರೆ ನಾಡಿಗೆ ವರವೊ, ಶಾಪವೊ

Author : ಶ್ರೀನಿವಾಸ ಹಾವನೂರ

Pages 124

₹ 70.00




Year of Publication: 2008
Published by: ಭಾಗ್ಯಲಕ್ಷ್ಮೀ ಪ್ರಕಾಶನ
Address: 87, 3ನೇ ಕ್ರಾಸ್, 4ನೇ ಬ್ಲಾಕ್, ಬನಶಂಕರಿ 3ನೇ ಸ್ಟೇಜ್, ಬೆಂಗಳೂರು- 560085

Synopsys

‘ತುಂಗಭದ್ರೆ ನಾಡಿಗೆ ವರವೊ, ಶಾಪವೊ’ ಹಾಗೂ ಇತರ ಐತಿಹಾಸಿಕ ಸಮೀಕ್ಷೆಗಳು ಲೇಖಕ ಡಾ. ಶ್ರೀನಿವಾಸ ಹಾವನೂರರು ಸಂಪಾದಿಸಿರುವ ಕೃತಿ. ಈ ಕೃತಿಯಲ್ಲಿ ತುಂಗಭದ್ರೆ- ನಾಡಿಗೆ ವರವೋ, ಶಾಪವೋ, ಆನಂದನಿಧಿ-ವಿಜಯನಗರ ಕಾಲದ ಬ್ಯಾಂಕ್, ಶ್ರೀ ವಿಜಯೀಂದ್ರರ ನಿಶ್ಚಿತ ಕಾಲ ಯಾವುದು, ಆದಿಲ್ ಶಾಹಿಗಳ ಗ್ರಂಥಸಂಪದ, ಕೆಳದಿ ಅರಸರ ವಿದೇಶೀ ಸಂಬಂಧ, ಮೆಕೆನ್ಸಿಯ ಒಂದು ಅಜ್ಞಾನ ಸಂಗ್ರಹ, ಹೈದರಾಲಿಯೊಡನೆ ದೌತ್ಯ ಸಂಭಾಷಣೆ, ಟೀಪೂ ಸುಲ್ತಾನನ ಬಗ್ಗೆ ಬ್ರಿಟಿಶ್ ಆಕರಗಳು, ಟೀಪೂವಿನ ಹುಲಿ, ಪರ್ಶಿಯನ್ ರಾಯಭಾರಿ ಹಾಗೂ ದಿವಾನ ಪೂರ್ಣಯ್ಯ, ಸುರಪುರ ದುರಂತದ ನಿಜಸಂಗತಿ, ಉತ್ತರ ಕನ್ನಡ ಜಿಲ್ಲೆ ನಿರ್ಮಾಣವಾದದ್ದು ಹೇಗೆ, ತಾತ ವೆಂಕಟಕೃಷ್ಣಯ್ಯರ ಪೆನ್ಶನ್ ವಿಚಾರ, ಶಿಕ್ಷಣತಜ್ಞ ಎಚ್.ಜೆ. ಭಾಭಾ, ಕನಕಗೋಪುರ ಉಡುಪಿ(ಎರಡು ಟಿಪ್ಪಣಿಗಳು), ಕರ್ನಾಟಕ ಇತಿಹಾಸ ಅಕಾಡೆಮಿಯ 13ನೆಯ ಸಮ್ಮೇಳನದ ಅಧ್ಯಕ್ಷ ಭಾಷಣಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books