ತುರುವನೂರು ಲಿಂಗಾರ್ಯರ ತತ್ವಪದಗಳು-ಭಾಗ-1

Author : ಎಸ್. ನಟರಾಜ ಬೂದಾಳು

Pages 288

₹ 55.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಪ್ರೊ. ಎಸ್. ನಟರಾಜ ಬೂದಾಳು ಅವರು ಸಂಪಾದಿಸಿದ ಕೃತಿ-ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ-1. ತುರುವನೂರು ಕವಿ ಲಿಂಗಯ್ಯ ಅವರ ಬದುಕು ಬರಹ ಅರ್ಥಪೂರ್ಣ. ಕಥೆ, ನಾಟಕ, ಗೀತೆ, ಷಟ್ಪದಿ, ರಗಳೆ, ತ್ರಿಪದಿ ತತ್ವಪದಗಳನ್ನು ಬರೆದ ಆಧ್ಯಾತ್ಮಕ ಚಿಂತಕರಾಗಿದ್ದರು. ಚಿತ್ರದುರ್ಗದ ನೆಲದಲ್ಲಿದ್ದರೂ ಅಜ್ಞಾನ ಕವಿಗಳಂತೆ ಬದುಕು ನೂಕಿದವರು. ಕರ್ಮಯೋಗ ಹಾಗೂ ಜ್ಞಾನ ಯೋಗದ ಮಹತ್ವ ಸಾರುವ ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ಬದುಕಿನಲ್ಲಿ ಕಷ್ಟಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ. ನಮ್ಮೊಳಗಿನ ಬ್ರಹ್ಮನನ್ನು ನಂಬಬೇಕು. ಆಗಲೇ ಈ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಸಂದೇಶ ಅವರದ್ದು. ಸುಮಾರು 800ಕ್ಕೂ ಅಧಿಕ ತತ್ವಗಳನ್ನು ರಚಿಸಿದ್ದು, ಆ ಪೈಕಿ, ಈ ಕೃತಿಯು ಭಾಗ-1 ಎಂದು ಗುರುತಿಸಲಾಗಿದೆ. 

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books