ತುತ್ತು-ತತ್ವ

Author : ಕೆ.ಸಿ. ರಘು

Pages 144

₹ 150.00




Year of Publication: 2019
Published by: ಸಾವಣ್ಣ ಪ್ರಕಾಶನ
Address: 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು.

Synopsys

ನಮ್ಮ ಆಹಾರ ಪದ್ದತಿಯಲ್ಲ ಉಂಟಾದ ಬದಲಾವಣೆಗಳಿಂದಾಗಿ ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗಿದೆ.ಈ ಕೃತಿಯಲ್ಲಿ ಲೇಖಕರು ಆಹಾರದ ಬಗ್ಗೆ ನಾವು ಯಾವ ರೀತಿಯ ಕಾಳಜಿ ವಹಿಸಬೇಕೆಂದು ತಿಳಿಸಲಾಗಿದೆ.ಈ ಪುಸ್ತಕದಲ್ಲಿ ಸಣ್ಣ ಸಣ್ಣ ಕಥೆಗಳಿದ್ದು ಒದುಗರ ಗಮನ ಸೆಳೆದಿದೆ.ರಾಷ್ಟ್ರದ ರಾಜಕೀಯ-ಆರ್ಥಿಕ ವಿಚಾರಗಳನ್ನೂ ಒಳಗೊಂಡಿವೆ. ನಾವು ನಮ್ಮದೇ ಆದ ಪೌಷ್ಟಿಕ ಆಹಾರವನ್ನು ಕಡೆಗಣಿಸಿ, ವಿದೇಶದಿಂದ ತರಿಸಿದ ಎಣ್ಣೆ ಧಾನ್ಯಗಳು, ಕಾಳುಗಳು ಹಣ್ಣುಗಳನ್ನು ಉಪಯೋಗಿಸುತ್ತಿದ್ದೇವೆ. ನಮ್ಮ ಪೌಷ್ಟಿಕ ಆಹಾರವನ್ನು ರಫ್ತು ಮಾಡುತ್ತಿದ್ದೇವೆ.ಈ ಮೂಲಕ ನಾವು ನಮ್ಮ ಆರೋಗ್ಯವನ್ನು ಪೆಚಿಗೆ ಸಿಲುಕಿಸಿದ್ದೆವೆ.ನಮ್ಮ ಆಹಾರ, ನಮ್ಮ ಆರೋಗ್ಯಕರ ಪರಿಸರ ಹೇಗಿರಬೇಕೆಂದು ಈ ಬರಹದಲ್ಲಿ ವಿವರಿಸಲಾಗಿದೆ.

About the Author

ಕೆ.ಸಿ. ರಘು
(27 March 1964 - 15 October 2023)

ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು. ಭಾರತದಲ್ಲಿ ಈ ರೀತಿಯ ...

READ MORE

Reviews

ಕಾರ್ಪೋರೇಟ್‌ ಜಗತ್ತಿನಲ್ಲಿ ಅನ್ನಾವತಾರ


ಮೂರಿಂಚಿನ ನಾಲಗೆಯ ಮಾತು ಕೇಳದವರಾರು? ಹೊಟ್ಟೆಗೆ ಹಿತವಾಗುವಂಥ ಊಟಕ್ಕಿಂತಲೂ ನಾಲಿಗೆ ತಣಿಸುವಂಥ ಪದಾರ್ಥಗಳತ್ತಲೇ ನಮ್ಮೆಲ್ಲರ ಚಿತ್ತ. ಆಹಾರವೆಂದರೆ ಅದು ಹಸಿವನ್ನಷ್ಟೇ ನೀಗಿಸುವುದಿಲ್ಲ. ಆರೋಗ್ಯ, ಆನಂದಕ್ಕೂ ಆಹಾರವೇ ಮೂಲ. ಈ ಅಂಶವನ್ನು ಕೆ.ಸಿ.ರಘು ಅವರು ತಮ್ಮ 'ತುತ್ತು ತತ್ತ್ವ' ಪುಸ್ತಕದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಕನ್ನಡದ ಕೆಲವೇ ಕೆಲವು ಆಹಾರ ತಜ್ಞರಲ್ಲಿ ರಘು ಪ್ರಮುಖರು. ಅಡುಗೆ-ಆಹಾರ ಕುರಿತ ಬರಹಗಳಿಗೆ ಸಾಕಷ್ಟು ಓದುಗರಿದ್ದಾರೆ. ಆದರೆ, ವಿಶ್ವಾಸ ಹುಟ್ಟಿಸುವಂಥ ಬರಹಗಳ ಕೊರತೆ ಕನ್ನಡದಲ್ಲಿದೆ. ಕಾಪೊರ್‍ರೇಟ್‌ ಜಗತ್ತಿನಲ್ಲಿ ಅನ್ನಾವತಾರದ ನಾನಾ ಬಗೆಗಳನ್ನು ಪುಟ್ಟಪುಟ್ಟ 65 ಬರಹಗಳ ಮೂಲಕ ನಮ್ಮೆದುರು ತೆರೆದಿಟ್ಟಿದ್ದಾರೆ. ಈ ಪುಸ್ತಕದ ಮೂಲಕ ಒಂದೊಂದೇ ತುತ್ತು ತಿನ್ನುತ್ತಾ, ತಿಂದದ್ದನ್ನು ಜೀರ್ಣಿಸಿಕೊಳ್ಳುತ್ತಾ ಹೋದರೆ ಆರೋಗ್ಯ ಮತ್ತು ಅನಂದಕ್ಕಾಗಿ ಹೊರಗಡೆ ಹುಡುಕುವ ಅಗತ್ಯವಿಲ್ಲ.

-ಹ.ಚ.ನಟೇಶ ಬಾಬು

ಕೃಪೆ: ವಿಜಯ ಕರ್ನಾಟಕ, 17-2-2019

Related Books