ಯು.ಆರ್. ಅನಂತಮೂರ್ತಿ ಸಮಸ್ತ ಕಥೆಗಳು

Author : ಯು.ಆರ್. ಅನಂತಮೂರ್ತಿ

Pages 552

₹ 456.00




Year of Publication: 2015
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಸಾಗರ  ತಾಲೂಕು, ಜಿಲ್ಲೆ ಶಿವಮೊಗ್ಗ-577417
Phone: 094802 80401

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರು ಬರೆದ ಸಮಸ್ತ ಕಥೆಗಳ ಸಂಗ್ರಹ ಕೃತಿ ಇದು.  ಹಿಂದೆ ಪ್ರಕಟವಾದ `ಐದು ದಶಕದ ಕಥೆಗಳು` ಸಂಕಲನದ ಎಲ್ಲ ಕಥೆಗಳ ಜತೆಗೆ, ನಂತರ ಪ್ರಕಟಿತ ಕಥಾಸಂಕಲನ ಮತ್ತು ಅಪ್ರಕಟಿತ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. 

ಸಾಹಿತ್ಯ ವಿಚಾರದಲ್ಲಿ ಅತೀ ಗಂಭೀರವಾಗಿ ಹಾಗೂ ಅಧಿಕೃತವಾಗಿ ಮಾತನಾಡಬಲ್ಲ ಅನಂತಮೂರ್ತಿ ಅವರು, ಸಾಹಿತ್ಯವಲ್ಲದ್ದನ್ನು ಬರೆದಿಲ್ಲ ಎಂಬ ವ್ಯಾಪಕ ಅಭಿಪ್ರಾಯ ಕನ್ನಡ ಸಾಹಿತ್ಯ ವಲಯದಲ್ಲಿದೆ. ಅವರ ಸಮಗ್ರ ಕಥೆಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು. 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books