ಯು. ಆರ್. ಎಂಬ ನೀವು

Author : ಶೂದ್ರ ಶ್ರೀನಿವಾಸ್

Pages 100

₹ 80.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9341234456

Synopsys

ಲಂಕೇಶ್, ಶರ್ಮಾ, ಅನಂತಮೂರ್ತಿ ಕಾಲ ಘಟ್ಟದ ಕೊಂಡಿ ಇವರು. ಅವರೆಲ್ಲರನ್ನೂ ತನ್ನೊಳಗಿಟ್ಟುಕೊಂಡು ಬರೆದವರು. ಅವರೆಲ್ಲರೊಳಗಿದ್ದೂ, ಅವರಿಂದ ತುಸು ದೂರದಲ್ಲಿ ನಿಂತು ಅವರನ್ನು ಗ್ರಹಿಸಲು ಪ್ರಯತ್ನಿಸುತ್ತಾ ಬಂದವರು ಶೂದ್ರ ಶ್ರೀನಿವಾಸ್ ಅವರು. ಅವರ ಶೂದ್ರ ಪತ್ರಿಕೆಯೂ ಕನ್ನಡಕ್ಕೆ ವಿಭಿನ್ನವಾದ, ವಿಶಿಷ್ಟವಾದ ಗದ್ಯವೊಂದನ್ನು ಕೊಟ್ಟಿತು. ಇಂತಹ ಶೂದ್ರ ಶ್ರೀನಿವಾಸ್ ಅನಂತಮೂರ್ತಿ, ಲಂಕೇಶ್ ಮೊದಲಾದವರ ಬಗ್ಗೆ ಬರೆದರೆ ಹೇಗಿರುತ್ತದೆ? ಆ ಪ್ರಯತ್ನ ಖಂಡಿತವಾಗಿಯೂ ಹೊಸತನದಿಂದ ಕೂಡಿರುತ್ತದೆ ಎನ್ನುವುದಕ್ಕೆ ಅವರ ಹೊಸ ಕೃತಿ ಯು. ಆರ್. ಎಂಬ ನೀವು ಉತ್ತಮ ಉದಾಹರಣೆಯಾಗಿದೆ. ಅನಂತಮೂರ್ತಿಯನ್ನು ಒಳಗಿನ ಕಣ್ಣಿನಿಂದ ನೋಡಿದ ಕೃತಿ ಇದು. ಬಹುಶಃ ಅನಂತಮೂರ್ತಿಯವರನ್ನು ಒಂದು ರೀತಿಯ ಲೌಕಿಕವಾಗಿದ್ದೂ ಅಲೌಕಿಕವಾಗಿರುವ ಕಣ್ಣಿನಲ್ಲಿ ಶೂದ್ರ ಅವರು ನೋಡಿದ್ದಾರೆ. ಇದೇ ಸಂದರ್ಭದಲ್ಲಿ ಅನಂತಮೂರ್ತಿಯ ಕುರಿತಂತೆ ಕಥನ ಗುಣವುಳ್ಳ ಗದ್ಯವೂ ಹೌದು.  ಇವೆರಡನ್ನು ಪದ್ಯದ ಲಯದಲ್ಲಿ ಇಲ್ಲಿ ಕಟ್ಟಿಕೊಟ್ಟಿಕೊಡಲಾಗಿದೆ.

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books