ಉದ್ವಸ್ಥ

Author : ಡಿ.ಎಸ್.ಚೌಗಲೆ

Pages 88

₹ 70.00




Year of Publication: 2016
Published by: ಸಿರಿವರ ಪ್ರಕಾಶನ
Address: ಸಿರಿವರ ಪ್ರಕಾಶನ ನಂ.M37/B, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು-560021
Phone: 984410706

Synopsys

ಸ್ವತಂತ್ರ ನಾಟಕಗಳಿರಲಿ, ಅನುವಾದಗಳಿರಲಿ ಡಿ.ಎಸ್.ಚೌಗಲೆಯವರು ತಮ್ಮ ಕಾಲದ ಸಾಮಾಜಿಕ ಬದುಕಿಗೆ ತೀವ್ರವಾಗಿ ಸ್ಪಂದಿಸುವ ಲೇಖಕ.

ಗಾಂಧಿ ಪ್ರಣೀತ ವಿಚಾರಗಳು ನಾಟಕಕಾರರನ್ನು ಬಹುವಾಗಿ ಕಾಡಿದ್ದು, 'ಉದ್ವಸ್ಥ' ನಾಟಕದಲ್ಲಿಯೂ ಗ್ರಾಮಸ್ವರಾಜ್ಯ ಪರಿಕಲ್ಪನೆ ಹರಡಿಕೊಂಡಿದೆ. ನಾಟಕದ ಆರಂಭ ಹಾಗೂ ಮುಕ್ತಾಯದ ದೃಶ್ಯಗಳು ಗಾಂಧಿ ಪುತ್ಥಳಿಯ ಸನ್ನಿಧಿಯಲ್ಲೇ ನಡೆಯುತ್ತವೆ. ನಾಟಕದ ಅರ್ಧಕ್ಕೂ ಹೆಚ್ಚು ಘಟನೆಗಳು ನಡೆಯುವುದು ಸಾರ್ವಜನಿಕ ಸ್ಥಳಗಳಲ್ಲಿ. ಸರ್ಕಲ್, ಬಾರ್, ಎಮ್ಮೆಲ್ಲೆ ಆಫೀಸ್ ಮುಂತಾದ ಜಾಗಗಳಲ್ಲಿ. ಹೀಗೆ ಒಂದು ಕುಟುಂಬದ ಕತೆಯೊಂದಿಗೆ ಸಾರ್ವಜನಿಕ ಜೀವನದಲ್ಲಾದ ಪಲ್ಲಟವನ್ನೂ ನಾಟಕ ಕಟ್ಟಿಕೊಡುತ್ತದೆ. ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ರೈತಾಪಿವರ್ಗಕ್ಕೆ ತಂದೊಡ್ಡಿರುವ ಸಮಸ್ಯೆಗಳ ಕುರಿತು ನಾಟಕ ಬೆಳಕು ಚೆಲ್ಲುತ್ತದೆ. 

ಸಂಸ ರಂಗಸಾಹಿತ್ಯ ಪುರಸ್ಕಾರ ಪಡೆದಿರುವ ಈ ಕೃತಿಗೆ ಹಿರಿಯ ಸಾಹಿತಿ ಕೆ.ಮರಳುಸಿದ್ಧಪ್ಪ ಮುನ್ನುಡಿ ಬರೆದಿದ್ದಾರೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books