ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು ಭಾಗ 4, ಕುಂದಾಪುರ ಮತ್ತು ಬೈಂದೂರು

Author : ರಾಜೇಶ್ ನಾಯ್ಕ

Pages 188

₹ 230.00




Year of Publication: 2021
Published by: ರಾಜೇಶ ನಾಯ್ಕ
Address: ಪಂಚಾಕ್ಷರಿ, 3-3-71A, ಜನಾರ್ದನ ದೇವಸ್ಥಾನ ರಸ್ತೆ, ಅಂಬಲಪಾಡಿ, ಉಡುಪಿ-576103
Phone: 9686692904

Synopsys

ಲೇಖಕ ರಾಜೇಶ್ ನಾಯ್ಕ ಅವರ ಕೃತಿ ‘ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು ಭಾಗ-4. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಸುಮಾರು 91 ಪ್ರಾಚೀನ ದೇವಾಲಯಗಳ ಸಂಕ್ಷಿಪ್ತ ವಿವರಗಳನ್ನು ಛಾಯಾಚಿತ್ರಗಳ ಜೊತೆಗೆ ನೀಡಲಾಗಿದೆ. ಕುಂದಾಪುರ ತಾಲೂಕಿನ 63 ಹಾಗೂ ಬೈಂದೂರು ತಾಲೂಕಿನ 28 ಸಚಿತ್ರ ಸಂಕ್ಷಿಪ್ತ ವಿವರ ಹಾಗೂ ಶಾಸನೋಕ್ತ ಮಾಹಿತಿಯನ್ನು ಒಳಗೊಂಡಿದೆ. ಹಲವು ದೇಗುಲಗಳ ಕೌತುಕಮಯ ವಿಷಯಗಳನ್ನು ಪುಸ್ತಕದಲ್ಲಿ ಕಾಣಬಹುದು. ಹೆಚ್ಚಿನ ದೇಗುಲಗಳು ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದರೂ ಕೆಲವು ದೇಗುಲಗಳು ಇನ್ನೂ ತಮ್ಮ ಮೂಲ ರೂಪದಲ್ಲಿ ಅವನತಿಯತ್ತ ಸಾಗುತ್ತಿರುವುದೂ ಕಂಡುಬರುತ್ತದೆ ಎಂದು ಲೇಖಕರು ವಿವರಿಸಿದ್ದಾರೆ.

About the Author

ರಾಜೇಶ್ ನಾಯ್ಕ

ಲೇಖಕ ರಾಜೇಶ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದವರು. ಉಡುಪಿಯಲ್ಲಿ ಪದವಿ ಪೂರ್ವ ಶಿಕ್ಷಣ,  ಉಡುಪಿ ಜಿಲ್ಲೆಯ ನಿಟ್ಟೆಯ ಡಾ.ಎನ್ ಎಸ್ ಎ ಎಂ ಪ್ರಥಮ ದರ್ಜೆ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಬೆಳಗಾವಿಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಎಜ್ಯುಕೇಶನ್ & ರಿಸರ್ಚ್‍ನಲ್ಲಿ ಎಂಬಿಎ ಪದವಿ ಪಡೆದು, 1998ರಲ್ಲಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ, 2000ರಲ್ಲಿ ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದಕ್ಕೆ ಸೇರಿದರು. 2013ರಿಂದ ’ಬ್ರಾಂಡಿಂಗ್ ಹಾಗೂ ಎಡ್ವರ್ಟೈಸಿಂಗ್’ ಸೇವೆ ನೀಡುವ ಕನ್ಸಲ್ಟನ್ಸಿಯನ್ನು ಉಡುಪಿಯಲ್ಲಿ ಆರಂಭಿಸಿ, ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಇತಿಹಾಸ, ಪ್ರಾಚೀನ ದೇವಾಲಯಗಳು, ಚಾರಣ ...

READ MORE

Related Books