ಉಡುಪಿ ಜಿಲ್ಲೆಯ ಸಿರಿ ಆಲಡೆಗಳು

Author : ಅರುಣಕುಮಾರ್ ಎಸ್. ಆರ್.

Pages 220

₹ 150.00




Year of Publication: 2015
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ. 1, ಮಿಲ್ಸ್ ನರಸಿಂಹಯ್ಯ ಲೇಔಟ್, ಎನ್.ಆರ್.ಐ. ಇನ್‌ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿಪಾಳ್ಯ ಬೆಂಗಳೂರು-560 072.

Synopsys

‘ಉಡುಪಿ ಜಿಲ್ಲೆಯ ಸಿರಿ ಆಲಡೆಗಳು’ ಅರುಣಕುಮಾರ ಎಸ್.ಆರ್. ಅವರ ಸಂಶೋಧನಾತ್ಮಕ ಲೇಖನಗಳು. ಕರ್ನಾಟಕದ ಕರಾವಳಿ ಭಾಗದಲ್ಲಿ ಬಂಟ ಸಮುದಾಯದ `ಸಿರಿ' ಎಂಬ ಐತಿಹಾಸಿಕ ಹೆಣ್ಣುಮಗಳು ಸಾಮಾಜಿಕ, ಕೌಟುಂಬಿಕ, ಭಾವನಾತ್ಮಕ ಅಸಮಾನತೆಯ ವಿರುದ್ದ ಹೋರಾಡಿದ ಕಥೆಯ ಅಭಿನಯ ರೂಪವೇ 'ಸಿರಿ ಮತಾಚರಣೆ' ಎಂಬ ವಿಶಿಷ್ಟ ಆರಾಧನಾ ಪರಂಪರೆ.

ಬ್ರಾಹ್ಮಣೇತರ ವರ್ಗ, ಅದರಲ್ಲೂ ವಿಶೇಷವಾಗಿ ಸ್ತ್ರೀಯರೇ ಹೆಚ್ಚಾಗಿ ಪಾಲ್ಗೊಳ್ಳುವ ಈ ಮತಾಚರಣೆಯಲ್ಲಿ ಅವರ ಬದುಕು, ಭಾವಗಳಿಗೆ ಜೀವ ತುಂಬುವ ಮನಃಶಾಸ್ತ್ರೀಯ ಪರಿಹಾರ ರೂಪದ ಆರಾಧನೆ ಇದು.  'ಸಿರಿ ಆಲಡೆಗಳು' ಈ ಮತಾಚರಣೆಯ ಕೇಂದ್ರಗಳು ಮಾತ್ರವಲ್ಲ ಸ್ತ್ರೀಯರ ಬದುಕಿಗೆ ನೆಮ್ಮದಿ ನೀಡುವ ಸಂಕೀರ್ಣ ತಾಣಗಳು. ಈ ಆರಾಧನಾ ಕೇಂದ್ರಗಳ ಕುರಿತು ಸಂಪೂರ್ಣ ಅಧ್ಯಯನ ನಡೆದಿರುವುದು ಕಡಿಮೆ.

ಅರುಣಕುಮಾರ್, ಅವಿಭಜಿತ ದ.ಕ. ಜಿಲ್ಲೆಯ ಸಿರಿ ಆರಾಧನಾ ಕೇಂದ್ರಗಳ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಿ ಪಿಎಚ್.ಡಿ. ಪಡೆದವರು. ಈ ಕೃತಿ ಅವರ ಸಂಶೋಧನ ಅಧ್ಯಯನದ ಒಂದು ಭಾಗವಾದ ಉಡುಪಿ ಜಿಲ್ಲೆಯ ಸಿರಿ ಆಲಡೆಗಳ ಕುರಿತು ಆಂಶಿಕ ಮಾಹಿತಿಯನ್ನೊಳಗೊಂಡ ಕೃತಿ. ಸ್ವತಃ ಲೇಖಕರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಈ ಅಧ್ಯಯನದಲ್ಲಿ ವಿಶೇಷ ಒಳನೋಟಗಳಿವೆ. ಸಿರಿ ಆಲಡೆಗಳ ಕುರಿತು ಅಧ್ಯಯನಾಸಕ್ತರಿಗೆ ಈ ಹೊತ್ತಗೆ ಒಂದು ಉತ್ತಮ ಆಕರ ಗ್ರಂಥ. 

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books