ಉಪನಿಷತ್ತುಗಳ ಆರ್ಥಲೋಕ

Author : ಆರ್.ಡಿ. ಹೆಗಡೆ

Pages 128

₹ 75.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖ ಆರ್.ಡಿ. ಹೆಗಡೆ, ಆಲ್ಮನೆ ಅವರ ಕೃತಿ-ಉಪನಿಷತ್ತುಗಳ ಅರ್ಥಲೋಕ. ವೇದಗಳು ಐಹಿಕ ಭೋಗಭಾಗ್ಯಗಳನ್ನು ಒದಗಿಸುವ ಯಜ್ಞಯಾಗಾದಿಗಳ ಕರ್ಮಮಾರ್ಗವನ್ನು ಬೋಧಿಸಿದರೆ, ಉಪನಿಷತ್ತುಗಳು ಆತ್ಯಂತಿಕ ಸತ್ಯವನ್ನು ಅಂದರೆ, ಯಾವುದರಿಂದ ಮಾನವನು ಐಹಿಕ ಬಂಧನದಿಂದ ಬಿಡುಗಡೆ ಪಡೆಯಬಹುದೋ ಅಂತಹ ದಿವ್ಯಜ್ಞಾನವನ್ನು ನೀಡುತ್ತವೆ. ಉಪನಿಷತ್ತುಗಳ ಪ್ರಮುಖ ವ್ಯಾಖ್ಯಾನಕಾರರಾದ ಶಂಕರಾಚಾರ್ಯರ ಪ್ರಕಾರ ಯಾರು ವೈದಿಕ ಕರ್ಮಮಾರ್ಗದಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿರುವರೋ, ಯಾರು ಐಹಿಕ ಅಥವಾ ಸ್ವರ್ಗಲೋಕದ ಸುಖಸಂಪತ್ತುಗಳ ಆಶೆಯನ್ನು ದಾಟಿರುವರೋ, ಅಂತಹ ಉನ್ನತ ಹಂತದ ಮಾನವರಿಗೆ ಮಾತ್ರ ಉಪನಿಷತ್ತುಗಳು ಹಿಡಿಸುತ್ತವೆ ಎಂಬುದು. ಲೇಖಕ ಆರ್.ಡಿ.ಹೆಗಡೆಯವರು ಈ ಪುಸ್ತಕದಲ್ಲಿ ವೇದಾಂತದ ಪಾರಿಭಾಷಿಕ ಪದಜಾಲವನ್ನು ಬಳಸದೆ ತಮ್ಮದೇ ಆದ ಓದಿನಿಂದ ತಮ್ಮದೇ ಆದ ಭಾಷೆಯನ್ನು ಬಳಸಿರುವುದು ಈ ಕೃತಿಯ ಒಂದು ವೈಶಿಷ್ಟ್ಯವಾಗಿದೆ. ಅಲ್ಲದೆ, ತಾವು ಆರಿಸಿಕೊಂಡ ಉಪನಿಷತ್ತುಗಳಲ್ಲಿ ಎಲ್ಲೆಲ್ಲಿ ಜೀವಪರವಾದ ಹಾಗೂ ಜೀವವಿರೋಧಿಯಾದ ನಿಲುವುಗಳು ಒಡಮೂಡಿವೆ ಮತ್ತು ಅವುಗಳಿಂದ ವ್ಯಕ್ತಿಯ ಹಾಗೂ ಸಮಾಜದ ಜೀವನದ ಮೇಲೆ ಆಗುವ ಪರಿಣಾಮಗಳು ಯಾವ ಬಗೆಯವು ಎಂಬ ವಿಶ್ಲೇಷಣೆಯೂ ಇದೆ.

About the Author

ಆರ್.ಡಿ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿರುವ ಆರ್‌.ಡಿ. ಹೆಗಡೆ ಅವರು ಜನಿಸಿದ್ದು  1964ರ ಡಿಸೆಂಬರ್‌ 3ರಂದು. ಶಿರಸಿ, ಉತ್ತರ ಕನ್ನಡ  ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ. ಅವರು ಭಾರತದಲ್ಲಿ ಶಿಕ್ಷಣ ಸಾಧ್ಯತೆ ಮತ್ತು ಸವಾಲು ಎಂಬ ಪುಸ್ತಕ್ಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಭಾಸನಾಟಕಗಳ ಕಥೆ (ಸಂಸ್ಕೃತದಲ್ಲಿ), ವಾಲ್ಮಿಕಿರಾಮಾಯಣದ ಸುಭಾಷಿತಗಳು (ಸಂಗ್ರಹ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ಮೂರು ಬಾರಿ ಮುದ್ರಿತ),  ಉಪನಿಷತ್ತುಗಳ ಅರ್ಥಲೋಕ(ಮೂರು ಬಾರಿ ಮುದ್ರಿತ),  ಪುಟ್ಟ ಗುಲಾಬಿ ಹೂವೇ, (ಕಥಾಸಂಕಲನ), ದಾರಿ(ಕಿರು ಕಾದಂಬರಿ), ಭಾರತದಲ್ಲಿ ಉನ್ನತ ಶಿಕ್ಷಣ:ಸವಾಲು ಮತ್ತು ಸಾಧ್ಯತೆ(ಅನುವಾದ),   ಮಾನವತ್ವದ ಸಾರ(ಅನುವಾದ),  ಕೃತಿಚಿತ್ತ, ಸಂಕಥನ, ಜೆನ್‌ಮಹಾಯಾನ,  ಕವಿ ವಿ ಜಿ ಭಟ್ಟರ ...

READ MORE

Related Books