ಉಪನಿಷತ್ ಕಥಾವಳಿ

Author : ರಂಗನಾಥ ದಿವಾಕರ

Pages 126




Year of Publication: 1952
Published by: ರಂಗನಾಥ ರಾಮಚಂದ್ರ ದಿವಾಕರ
Address: ಅಧ್ಯಾತ್ಮ ಕಾರ್ಯಾಲಯ, ಹುಬ್ಬಳ್ಳಿ

Synopsys

ಉಪನಿಷತ್ ಕಥಾವಳಿ-ರಂಗನಾಥ ರಾಮಚಂದ್ರ ದಿವಾಕರ ಅವರು ಬರೆದ ಮೂರನೇ ಆವೃತ್ತಿಯ ( 1935 ಹಾಗೂ 1942ರಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣ) ಕೃತಿ. ಸಾಮ್ರಾಟನಾದರೂ ನೆಮ್ಮದಿ ಇರುತ್ತದೆಂದಲ್ಲ; ಎಷ್ಟೇ ತಿಳಿದಿದ್ದೇನೆ ಎಂದರೂ ಕಡಿಮೆ ಮತ್ತು ಜ್ಞಾನದ ಹಸಿವು ಹಿಂಗದು. ಅರಿವೇ ಗುರು ಎಂಬುದು ಅಂತಿಮ ಸತ್ಯ. ಅದುವೇ ದೇವನೊಲಿಯುವ ಪರಿ. ಕೇವಲ ಹಣದ ಸಂಪತ್ತಿನಿಂದ ಮನಸ್ಸು ತೃಷ್ತಿಯಾಗದು. ಕೇವಲ ಸಂಪತ್ತಿನಿಂದ ಅಮೃತವನ್ನೂ ಪಡೆಯಲಾಗದು. ಇಂತಹ ಉಪನಿಷತ್ ವಿಚಾರಗಳು-ಈ ಕೃತಿಯ ಗಟ್ಟಿತನ.

ಭಾರತೀಯ ತತ್ರವಜ್ಞಾನವನ್ನು ಅರಿಯಬೇಕಾದರೇ ಉಪನಿಷತ್ತುಗಳ ಸಾರವುಳ್ಳ ಈ ಕೃತಿಯು ಮುಖ್ಯ ದ್ವಾರದಂತಿದೆ ಎಂದು ಲೇಖಕ ರಂಗನಾಥ ದಿವಾಕರ ಅವರು ಕೃತಿಯ ಕುರಿತು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಸತ್ಯಕಾಮ ಜಾಬಾಲ, ಉಪಕೋಸಲನ ಕಥೆ, ಆಶ್ವಪತಿ ಕೈಕೇಯಿ ಜ್ಞಾನ, ಅರುಣೀ ವಿದ್ಯೆ, ಮಹಾಜ್ಞಾನಿ ಯಾಜ್ಞವಲ್ಕ್ಯ ಸೇರಿದಂತೆ ಇತರೆ ಶೀರ್ಷಿಕೆಯ 20 ಕಥೆಗಳು ಒಳಗೊಂಡಿವೆ. ಈ ಕಥೆಗಳ ಸಾರಾಂಶ ದೇಶ-ಕಾಲಾತೀತ; ಮಾನವೀಯತೆ ಹಾಗೂ ಜೀವನ ನಡೆ-ನುಡಿಯ ಪರಿಣಾಮಕತೆಯಿಂದಾಗಿ ಸದಾ ಮಾರ್ಗದರ್ಶಕವಾಗಿವೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books