ಉತ್ತರ ಕರ್ನಾಟಕದ ಭಜನೆ ಹಾಡುಗಳು

Author : ಸಿ.ಕೆ ನಾವಲಗಿ

Pages 432

₹ 50.00




Year of Publication: 2006
Published by: ಕರ್ನಾಟಕ ಸರ್ಕಾರ
Address: ಬೆಂಗಳೂರು

Synopsys

ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಹಲವು ನಮೂನೆಯ ಭಜನೆ ಹಾಡುಗಳನ್ನು ಒಂದೆಡೆ ಸಿಗುವಂತೆ ಮಾಡಿದ್ದಾರೆ ಲೇಖಕ ಸಿ.ಕೆ. ನಾವಲಗಿ. ಈ ಕೃತಿಯಲ್ಲಿ ಪುರಂದರದಾಸರ ಹಾಗೂ  ಕನಕದಾಸರ ಕೀರ್ತನೆಗಳು, ನಿಜಗುಣ ಶಿವಯೋಗಿಗಳ ಕೈವಲ್ಯಗಳು, ಶಿಶುನಾಳ ಶರೀಫರ ತತ್ವಪದಗಳು, ಕಡಕೋಳ ಮಡಿವಾಳಪ್ಪನವರ ತತ್ವಪದಗಳು, ನಿಜಲಿಂಗ ಭದ್ರೇಶ್ವರ ‘ಅನುಭವ ಪದಗಳು’, ಚನ್ನಮಲ್ಲಯ್ಯನ ಭಜನೆ ಹಾಡುಗಳು, ಬಂಡೆಪ್ಪ ಕವಿಯ ಭಜನೆ ಹಾಡುಗಳು, ಪರಮಹಂಸ ಸದ್ಗುರು ಶಾಮಾನಂದರ ಕೈವಲ್ಯಾಮೃತ, ಸಿದ್ಧಗಿರಿಸ್ವಾಮಿ ಮಠಪತಿಯವರ ಗಿರೀಶ ಗೀತೆ ಶತಕ, ಶ್ರೀ ಮುದ್ದಯ್ಯ ಹಿರೇಮಠ ಅವರ ಭಜನಾ ಪದಗಳು, ಇಬ್ರಾಹೀಮ. ಸುತಾರ ಅವರ ಪರಮಾರ್ಥಲಹರಿ, ಶ್ರೀ ಬಾಳೇಸ ಚಿಕ್ಕಣ್ಣನವರ ‘ಕೈವಲ್ಯ ಕಾಮಧೇನು, ಶ್ರೀ ಶಂಕರಾನಂದಸ್ವಾಮಿ ಯರಗಲ್‌ ಮಠ ಅವರ ಕಾವ್ಯಲಹರಿ, ಶ್ರೀ ನಿಜಗುಣದೇವರ ಕೈವಲ್ಯ ಕಲ್ಪತರು ಹೀಗೆ ಭಜನೆ ಹಾಡುಗಳ ರಾಶಿಯೇ ತುಂಬಿರುವುದು ಈ ಕೃತಿಯ ವೈಶಿಷ್ಟ್ಯ. ಕರ್ನಾಟಕ ಸರ್ಕಾರದ ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books