ವಾಗ್ವಾದ ವ್ಯಸನ

Author : ಅಜಕ್ಕಳ ಗಿರೀಶ ಭಟ್

Pages 98

₹ 90.00




Year of Publication: 2018
Published by: ಚಿಂತನ ಬಯಲು
Address: 15-109, ಅನಿಕೇತನ, ಮೊಡಂಕಾಪು ಅಂಚೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ- 574219
Phone: 08255231107

Synopsys

‘ವಾಗ್ವಾದ ವ್ಯಸನ’ ಅಜಕ್ಕಳ ಗಿರೀಶ ಭಟ್ ಅವರು ವಿವಿಧ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಬರಹಗಳ ಸಂಕಲನ. ಇಲ್ಲಿಯ ಭಾಷೆ ಕೂಡಾ ಕೆಲವು ಕಡೆ ಜಾಲತಾಣದ ಭಾಷೆಯಾಗಿಬಿಟ್ಟಿದೆ. ವಾಗ್ವಾದಗಳು, ಸಂವಾದಗಳು ನಡೆಯುವಾಗ ಹೊಣೆಗಾರಿಕೆ ಇದ್ದವರು ಪ್ರತಿಕ್ರಿಯೆ ನೀಡುವುದು ಅನಿವಾರ್ಯ. ಅಂತಹ ಸಮಯದಲ್ಲಿ ಮೌನವಹಿಸಿದರೆ ಅದು ಪಲಾಯನವಾದ ವಾಗುತ್ತದೆ. ಲೇಖಕರು ಅಂತಹ ವಿಷಯಗಳತ್ತ ಗಮನ ಹರಿಸಿದ್ದಾರೆ.

ಕಳೆದ 40-50 ವರ್ಷಗಳಿಂದಲೂ ಚರಿತ್ರೆ, ಸಮಾಜ, ಸಂಸ್ಕೃತಿ ಮುಂತಾದ ಸಂಗತಿಗಳ ಬಗ್ಗೆ ಚಾಲ್ತಿಯಲ್ಲಿರುವ ಫೇಕ್ ಸ್ಕಾಲರ್ ಶಿಪ್ ಸೃಷ್ಟಿಸಿದ ಬರಹಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಂಥ ಬರಹಗಳ ಹಿಂದಿರುವ ಅಪಸಿದ್ಧಾಂತಗಳು ಮತ್ತು ಅಪಕಲ್ಪನೆಗಳ ಕಾರಣದಿಂದ ಎಂಥ ಹಾನಿಯಾಗಿದೆ ಮತ್ತು ಆಗುತ್ತಿದೆ ಎಂಬ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಅಜಕ್ಕಳ ಗಿರೀಶ ಭಟ್

ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.  ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್‌ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...

READ MORE

Related Books