ವಚನ ಗಾನವಾಹಿನಿ

Author : ಹನುಮಣ್ಣನಾಯಕ ದೊರೆ

Pages 100

₹ 60.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ವಚನಗಳು ಸರಳ ಸುಂದರವಾಗಿದ್ದು ಹಾಡುಗಾರಿಕೆಗೆ ಬಹಳ ಚೆನ್ನಾಗಿ ಒಗ್ಗುತ್ತವೆ. ಸ್ವತಃ ಹಿಂದೂಸ್ಥಾನಿ ಗಾಯಕರು ಹಾಗೂ ಸಂಗೀತ ಪ್ರಾಧ್ಯಾಪಕ ಡಾ. ಹನುಮಣ್ಣ ನಾಯಕ ದೊರೆ ಅವರು, ಹಿಂದೂಸ್ಥಾನಿ ಸಂಗೀತದಲ್ಲಿ ಸಾಧನೆ ಮಾಡಿದವರು. ವಚನಗಾನ ವಾಹಿನಿ ಕೃತಿಯಲ್ಲಿ ವಚನಗಳಿಗೆ ಹಿಂದೂಸ್ಥಾನಿ ಸಂಗೀತದ ಚೌಕಟ್ಟಿನಲ್ಲಿ ಸ್ವರಲಿಪಿ ಅಳವಡಿಸಿಕೊಟ್ಟಿದ್ದಾರೆ. ಈ ಕೃತಿಯ ಎರಡು ಆವೃತ್ತಿಗಳಿದ್ದು, ಮೊದಲ ಆವೃತ್ತಿಯು 2005ರಲ್ಲಿ ಪ್ರಕಟಗೊಂಡಿತ್ತು.

About the Author

ಹನುಮಣ್ಣನಾಯಕ ದೊರೆ
(10 December 1948)

ಸಂಗೀತ ವಿಶ್ವವಿದ್ಯಾಲಯದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತಗಾರ, ಲೇಖಕ. 1948ರ ಡಿಸೆಂಬರ್‌ 10ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಗ್ಗಿಪಾಲದಲ್ಲಿ ಜನಿಸಿದರು. ವಚನಗಾನ ವಾಹಿನಿ, ರಾಗದೀಪಿಕೆ ಅವರ ಪ್ರಕಟಿತ ಕೃತಿಗಳು. ದಾಂಪತ್ಯ ಸಂಪದ (ಸಂಪಾದಿತ). ’ಹೈದ್ರಾಬಾದ ಕರ್ನಾಟಕದಲ್ಲಿ ಜನಪದ ಸಂಗೀತ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಗಾನಗಂಧರ್ವ ಪ್ರಶಾಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿಗಳು ಸಂದಿವೆ. ...

READ MORE

Related Books