ವಚನ ಸಂಸ್ಕೃತಿ - ಸಾಹಿತ್ಯ ಸಂಗತಿ

Author : ಎಸ್.ಜಿ. ಸಿದ್ಧರಾಮಯ್ಯ

Pages 204

₹ 120.00

Buy Now


Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧೀನಗರ ಬೆಂಗಳೂರು - 560085
Phone: 40114455

Synopsys

ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಚನ ಮತ್ತು ಆಧುನಿಕ ಸಾಹಿತ್ಯಗಳತ್ತ ಹರಿಸಿದ ಚಿಂತನೆಗಳ ಫಲ ’ವಚನ ಸಂಸ್ಕೃತಿ - ಸಾಹಿತ್ಯ ಸಂಗತಿ’ ಕೃತಿ. ವಚನಕಾರರಲ್ಲೇ ನಿರ್ಲಕ್ಷಿತ ಸಮುದಾಯಕ್ಕೆ ಸೇರಿದವರನ್ನು ಸಿದ್ಧರಾಮಯ್ಯ ಮುಖ್ಯವಾಗಿ ಧ್ಯಾನಿಸಿದ್ದಾರೆ. ಕೃತಿಯ ಮೊದಲ ಭಾಗ ಅಕ್ಕಮ್ಮ, ಲಕ್ಕಮ್ಮ, ನಗೆಯ ಕಾಯಕದ ಮಾರಿತಂದೆ ಮುಂತಾದವರ ಬಗೆಗೆ ಚರ್ಚಿಸಲಾಗಿದೆ. ಅಕಾಡೆಮಿಕ್ ವಲಯ ನಿರ್ಲಕ್ಷಿಸುತ್ತಿರುವುದಕ್ಕೇ ಒತ್ತು ನೀಡಿರುವುದರಿಂದ ಕೃತಿ ಮುಖ್ಯವಾದುದು ಎನಿಸುತ್ತದೆ. 

ಎರಡನೇ ಭಾಗದಲ್ಲಿ ಆಧುನಿಕ ಕನ್ನಡದ ವಿವಿಧ ಲೇಖಕರ ಬಗೆಗೆ ಬರೆದ ಲೇಖನಗಳಿವೆ. ಕವಿಗಳಾದ ಸನದಿ, ಎಲ್‌.ಎನ್‌. ಮುಕುಂದರಾಜ್‌ ಹಾಗೂ ಕತೆಗಾರ ಎಸ್‌.ಎಫ್‌. ಯೋಗಪ್ಪನವರ್‌ ಮುಂತಾದವರ ಕೃತಿಗಳನ್ನು ವಿಶ್ಲೇಷಿಸಿದ್ದಾರೆ. 

About the Author

ಎಸ್.ಜಿ. ಸಿದ್ಧರಾಮಯ್ಯ
(19 November 1946)

ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು  ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...

READ MORE

Related Books