ವಚನ ವೈವಿಧ್ಯ

Author : ವಿವೇಕಾನಂದ ಸಜ್ಜನ

Pages 74

₹ 100.00




Year of Publication: 2018
Published by: ಪ್ರಗತಿ ಗ್ರಾಫಿಕ್ಸ್
Address: ನಂ. 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 104
Phone: 080-23409512

Synopsys

‘ವಚನ ವೈವಿಧ್ಯ’ ವಿವೇಕಾನಂದ ಸಜ್ಜನ ಅವರ ಸಂಶೋಧನಾತ್ಮಕ ಲೇಖನಗಳ ಸಂಕಲನ. ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ವಿಶೇಷ ಅನುದಾನಕ್ಕೆ ಪಾತ್ರವಾಗಿದೆ. ಸೃಜನಶೀಲತೆಗೆ ಜೊತೆ ಜೊತೆಯಾಗಿ ವಿಮರ್ಶೆ ಹಾಗೂ ಸಂಶೋಧನೆ ಬೆಳೆಯದಿದ್ದರೆ ಸಾಹಿತ್ಯವನ್ನು ನೋಡುವ ಒಂದು ಕಣ್ಣು ಮಂದವಾದಂತೆಯೇ.

ಈ  ಕೃತಿಯಲ್ಲಿ ಲೇಖಕರು ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಕನ್ನಡ ಕವಿಗಳ ರೂಪಾಂತರ ಪ್ರಜ್ಞೆ. ರಾಮಚಂದ್ರ ಚರಿತ ಪುರಾಣದ ಮೇಲೆ ಅನೇಕಾಂತವಾದದ ಪ್ರಭಾವ, ಶ್ರುತಕೀರ್ತಿಯ ವಿಜಯ ಕುಮಾರಿ ಚರಿತೆಯಲ್ಲಿ ಬಸವ- ಒಂದು ವಿಶ್ಲೇಷಣೆ ಈ ಲೇಖನಗಳು ಕನ್ನಡ ಸಾಹಿತ್ಯವನ್ನು ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿರುವ ವಿಷಯಗಳನ್ನಿಟ್ಟುಕೊಂಡಿವೆ ಎಂಬುದು ವಿವೇಕಾನಂದರ ವಿಮರ್ಶೆಯು ಹೊಸದಾರಿಯನ್ನು ಅರಸುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.

ಈ ಕೃತಿಯಲ್ಲಿ ಸಮತೋಲನ, ಸಮಯ ಪ್ರಜ್ಞೆ ಸಮಾಜಕ್ಕೆ ಕೇಡಿಲ್ಲದಂತೆ ವಿಮರ್ಶಿಸುವ ಎದೆಗಾರಿಕೆ, ವ್ಯಕ್ತಿಗಿಂತ ಸಮಾಜ ಮುಖ್ಯವೆಂದು ಬಗೆಯುವ ಅಂತರ್ ಪ್ರಜ್ಞೆಗಳನ್ನು ವಿಮರ್ಶಕರು ಅಳವಡಿಸಿಕೊಳ್ಳಲು ಪ್ರತ್ನಿಸಿದ್ದಾರೆ.

About the Author

ವಿವೇಕಾನಂದ ಸಜ್ಜನ
(18 July 1992)

ವಿವೇಕಾನಂದ ಸಜ್ಜನ ಅವರು ಕಲುಬುಗಿ ಜಿಲ್ಲೆಯಲ್ಲಿ 1992ರಲ್ಲಿ ಜನಿಸಿದರು. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಸ್ವಗ್ರಾಮ. 2015ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಚಿನ್ನದ ಪದಕದೊಂದಿಗೆ ಎಂ.ಎ ಕನ್ನಡ ಪಡವಿ ಪಡೆದಿರುವ ಅವರು ಹಳೆಗನ್ನಡ, ಮಧ್ಯಕಾಲೀನ ಕನ್ನಡ ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು. ಜೊತೆಗೆ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿ, ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನಕ್ಕೆ ವಚನ ವೈವಿಧ್ಯ ವಿಮರ್ಶಾ ಲೇಖನಗಳ ಸಂಕಲನ ಆಯ್ಕೆ, 2018ರಲ್ಲಿ ಪ್ರಕಟ, ದ್ವಿತೀಯ ಕೃತಿ ಕನ್ನಡ ರಾಮಾಯಣಗಳಲ್ಲಿ ರಾವಣ 2019ರಲ್ಲಿ ಪ್ರಕಟವಾಗಿದೆ. ಪ್ರಸ್ತುತ ಕರ್ನಾಟಕ ...

READ MORE

Related Books