ವಚನಗಳ ಶುದ್ಧೀಕರಣ

Author : ಎಸ್.ಆರ್. ಗುಂಜಾಳ

Pages 62

₹ 40.00




Year of Publication: 2014
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿಮಠ

Synopsys

‘ವಚನಗಳ ಶುದ್ಧೀಕರಣ’ ಕೃತಿಯು ಎಸ್. ಆರ್. ಗುಂಜಾಳ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಚನಗಳು ಬಸವಾದಿ ಶಿವಶರಣರ ಒಂದು ಸಮೂಹ ಸೃಷ್ಟಿ. ಸಮಾಜೋಧಾರ್ಮಿಕ ಬದಲಾವಣೆಯ ಕ್ರಾಂತಿಗಾಗಿ ಹುಟ್ಟಿಕೊಂಡ ಈ ಸಾಹಿತ್ಯ ಪುರೋಹಿತಶಾಹಿ ವರ್ಗದ ಕೆಂಗಣ್ಣಿಗೆ ಗುರಿಯಾಗಿ ಅಪಾರ ಪ್ರಮಾಣದಲ್ಲಿ ಹಾಳಾಯಿತು. ಅಳಿದುಳಿದ ಹಸ್ತಪ್ರತಿಗಳು ಭಾವುಕ ಭಕ್ತರ ಜಗುಲೆ ಏರಿ ಪೂಜೆಯ ನೆಪದಲ್ಲಿ ಹಾಳಾದವು. ಇಷ್ಟೆಲ್ಲ ನಾಶವಾಗಿಯೂ ಉಳಿದ ವಚನ ಸಾಹಿತ್ಯವನ್ನು ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಿಸಿದವರು ಡಾ. ಫ.ಗು. ಹಳಕಟ್ಟಿಯವರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠ ಅವರು ಅದಕ್ಕೊಂದು ಅಕಾಡೆಮಿಕ ಶಿಸ್ತನ್ನು ತಂದುಕೊಟ್ಟರು. ಆದರೆ ಪ್ರಕಟಿತ ವಚನಗಳಲ್ಲಿಯೂ ಅನೇಕ ದೋಷಗಳು ಉಳಿದುಕೊಂಡಿರುವುದು ಮತ್ತು ಅವು ಅಪಾರ್ಥಕ್ಕೆಡೆ ಮಾಡಿಕೊಟ್ಟಿರುವುದು ಕಂಡು ಬರುತ್ತದೆ. ಇಂಥ ಕೆಲವು ವಿಚಾರಗಳನ್ನು ಡಾ.ಎಸ್.ಆರ್. ಗುಂಜಾಳ ಅವರು ಪ್ರಸ್ತುತ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಡಾ. ಗುಂಜಾಳ ಅವರ ಆಳವಾದ ಅಧ್ಯಯನದಿಂದ ರೂಪುಗೊಂಡ ಈ ಕೃತಿ ವಚನಗಳ ಶುದ್ಧೀಕರಣಕ್ಕೆ ದಾರಿದೀಪವಾಗಿದೆ ಎಂದಿದೆ.

About the Author

ಎಸ್.ಆರ್. ಗುಂಜಾಳ

ಎಸ್.ಆರ್.ಗುಂಜಾಳ ಅವರು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ತಂದೆ ರಾಯಪ್ಪ ಗುಂಜಾಳ, ತಾಯಿ ರುದ್ರಮ್ಮ. ಸ್ನಾತಕೋತ್ತರ ಪದವೀಧರರಾದ ಅವರು `ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ' ಪ್ರಬಂಧ ಮಂಡಿಸಿ ಬಂಗಾರದ ಪದಕದೊಡನೆ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ಹೊತ್ತರು. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ-ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಇಂಗ್ಲಿಷ್‌ನ 3ಕೃತಿ ಸೇರಿ ...

READ MORE

Related Books