ವಚನಗಳಲ್ಲಿ ವೀರಶೈವ ಧರ್ಮ

Author : ಎಚ್‌. ತಿಪ್ಪೇರುದ್ರಸ್ವಾಮಿ

Pages 224

₹ 200.00




Year of Publication: 2016
Published by: ಡಿ.ವಿ.ಕೆ. ಮೂರ್ತಿ

Synopsys

ಡಾ|| ಎಚ್. ತಿಪ್ಪೇರುದ್ರಸ್ವಾಮಿ ವಚನಗಳಲ್ಲಿ ವೀರಶೈವಧರ್ಮ ಭಾರತೀಯ ಧರ್ಮ ಪರಂಪರೆ ಶಕ್ತಿವಿಶಿಷ್ಟಾದೈತ ಸಿದ್ಧಾಂತ ಷಟ್‌ಸ್ಥಲ ಮಾರ್ಗ ಅಷ್ಟಾವರಣ ಪಂಚಾಚಾರ ಶರಣಧರ್ಮ ಸಂದೇಶ ವಚನಸಾಹಿತ್ಯ ಅಪಾರವಾದ ಒಂದು ಸಾಗರ, ಕನ್ನಡ ಸಾರಸ್ವತ ಭಂಡಾರವನ್ನು ಶ್ರೀಮಂತವೂ ವೈವಿಧ್ಯಪೂರ್ಣವೂ ವಿಚಾರಸಮನ್ವಿತವೂ ಆಗುವಂತೆ ಬೆಳೆಸಿದ ಒಂದು ವಿಶಿಷ್ಟ ಸಾಹಿತ್ಯಪ್ರಕಾರ ಅದು. ಮುಖ್ಯವಾಗಿ ಅದು ಯಾವುದೇ ಒಂದು ಧರ್ಮ ಸಿದ್ಧಾಂತದ ಪ್ರತಿಷ್ಠಾಪನೆಯ ದೃಷ್ಟಿಯಿಂದ ಪ್ರವೃತ್ತವಾದದ್ದಲ್ಲ; ಜನ ಜೀವನವನ್ನು ಹಸನುಗೊಳಿಸುವ ಮಾನವೀಯ ಧರ್ಮಭಾವನೆಯಿಂದ ಪ್ರೇರಿತ ವಾದದ್ದು. ಆದರೆ ಅದು ಹಬ್ಬಿ ಹರಡಿ ಕುಡಿಯೊಡೆದು ಬೆಳೆಯುವುದಕ್ಕೆ ವೀರಶೈವ ಧರ್ಮವನ್ನು ಅವಲಂಬಿಸಿತು. ಶರಣರ ಸಾಧನೆಯಿಂದ ಈ ಧರ್ಮ ಅತಿ ವ್ಯಾಪಕ ವಾದ ದೃಷ್ಟಿಯನ್ನು ಪಡೆಯಿತು. ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿ ಮೊದಲಾದ ಅನೇಕ ಶರಣರು ತಮ್ಮ ನಡೆನುಡಿಗಳಿಂದ ಧರ್ಮದ ಪರಿಧಿಯನ್ನು ಹಿಗ್ಗಿಸಿದರು. ವೀರಶೈವಧರ್ಮ, ಶರಣರ ಆಚಾರ ವಿಚಾರಗಳಿಂದ ಮಾನವತೆಯ ಉದ್ದಾರಕ ಶಕ್ತಿಯಾಯಿತು. ಧರ್ಮದ ತತ್ವಗಳನ್ನು ಅವರು ವಿಚಾರದ ಮೂಸೆಯಲ್ಲಿ ಕರಗಿಸಿ ಎರಕಹೊಯ್ತು ಆಚಾರದಿಂದ ನವಚೈತನ್ಯವನ್ನಿತ್ತು ಜೀವಂತಗೊಳಿಸಿದರು; ಚಿರಂತನಗೊಳಿಸಿದರು. ಸಿದ್ದಾಂತದ ಶಾಸ್ತ್ರೀಯವಾದ ಪ್ರತಿಪಾದನೆಗಿಂತ ಹೆಚ್ಚಿನ ಶಕ್ತಿಯನ್ನು ಧರ್ಮ ಇದರಿಂದ ಪಡೆಯಿತು. ಈ ಅರ್ಥದಲ್ಲಿ ವಚನಗಳು ವೀರಶೈವ ಧರ್ಮದ ಆಧಾರ ಗ್ರಂಥಗಳಾಗಿ ಪರಿಣಮಿಸಿದುವು. ವೀರಶೈವಧರ್ಮದ ಮೂಲಭೂತವಾದ ಎಲ್ಲ ತತ್ವಗಳ ವಿವೇಚನೆಯೂ ಇಲ್ಲಿ ಬಂದಿದೆ. ಆದರೆ ಶಾಸ್ತ್ರಪರಿಣತರಿಗೆ ಕೆಲವು ಕಡೆ ಇನ್ನೂ ಹೆಚ್ಚಿನ ವಿವರಗಳು ಬೇಕೆನ್ನಿಸಬಹುದು; ಶಾಸ್ತ್ರೀಯ ಸಿದ್ದಾಂತ ದೃಷ್ಟಿಯ ಕೊರತೆ ಕಾಣಬಹುದು. ಅದಕ್ಕೆ ಕಾರಣ ಇಲ್ಲಿನ ಉದ್ದೇಶವೇ ಬೇರೆಯಾಗಿರುವುದು, ಪ್ರೌಢ ಸಿದ್ದಾಂತ ಪ್ರತಿ ಪಾದನೆಯ ಮಾರ್ಗಕ್ಕೆ ಇಲ್ಲಿ ಕೈಹಾಕದೆ, ಶರಣರ ಸ್ವತಂತ್ರ ವಿಚಾರ ಮನೋ ಧರ್ಮದ ವಿವೇಚನೆಯನ್ನು ಮಾತ್ರ ಉದ್ದೇಶಿಸಲಾಗಿದೆ. ಆ ಸ್ವತಂತ್ರ ವಿಚಾರ ದರ್ಶನಕ್ಕೆ ಇದೊಂದು ಮುನ್ನುಡಿಯಾಗುವಂತಾದರೆ ಸಾಕು ಇಲ್ಲಿನ ಉದ್ದೇಶ ಸಾರ್ಥಕವಾದಂತೆ.

About the Author

ಎಚ್‌. ತಿಪ್ಪೇರುದ್ರಸ್ವಾಮಿ
(03 February 1928 - 28 October 1994)

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...

READ MORE

Related Books