ವಚನಕಾರ ಜೇಡರ ದಾಸಿಮಯ್ಯ

Author : ಸಿ.ಕೆ ನಾವಲಗಿ

Pages 74

₹ 20.00




Year of Publication: 2005
Published by: ಬಸವ ಸಮಿತಿ
Address: ಬಸವ ಭವನ, ಬಸವೇಶ್ವರ ಸರ್ಕಲ್‌, ಬೆಂಗಳೂರು-560001
Phone: 08022265505

Synopsys

ಜೇಡರ ದಾಸಿಮಯ್ಯ ಅವರ ಬದುಕು, ಬರೆಹ, ವಚನಗಳು... ಹೀಗೆ ಜೇಡರ ದಾಸಿಮಯ್ಯರ ಕುರಿತು ಪರಿಚಯಾತ್ಮಕ ಮಾಹಿತಿ ನೀಡುವ ಕೃತಿ ಇದಾಗಿದೆ. ಜೇಡರ ದಾಸಿಮಯ್ಯನ ಜೀವನ-ಸಾಧನೆ, ವಚನ ಸಾಹಿತ್ಯದ ಆದ್ಯಪ್ರವರ್ತಕ, ಜೇಡರ ದಾಸಿಮಯ್ಯನ ವಚನಗಳು, ಪರಮಾತ್ಮನ ಸ್ತುತಿ, ಪರಮಾತ್ಮನ ಇರವು-ಸ್ವರೂಪ, ಶ್ರದ್ಧಾನ್ವಿತ ಹರಭಕ್ತಿ, ಸ್ತ್ರೀಪರ ಚಿಂತನೆ, ಸಮಾನತಾ ತತ್ವ, ಮೌಢ್ಯತೆಯ ನಿವಾರಣೆ, ನೀತಿ-ನಿರೂಪಕ, ಜೀವನ ನಿಷ್ಠೆ, ವೈಚಾರಿಕ ಕ್ರಾಂತಿ, ವಚನ ನಿರೂಪಣೆ ತಂತ್ರ ಹೀಗೆ ಹಲವಾರು ಮಾಹಿತಿಗಳು ಈ ಕೃತಿಯಲ್ಲಿ ಒಳಗೊಂಡಿವೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books