ವಡ್ಡಾರಾಧನೆ- ಸಮಗ್ರ ಅಧ್ಯಯನ

Author : ಹಂಪ ನಾಗರಾಜಯ್ಯ

Pages 468

₹ 400.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕನ್ನಡ ಜೈನ ಸಾಹಿತ್ಯವನ್ನು ಅಥೆಂಟಿಕ್‌ ಆಗಿ ವಿವರಿಸಬಲ್ಲ ವಿದ್ವಾಂಸರು ಹಂ. ಪ. ನಾಗರಾಜಯ್ಯ. ಅವರದು ಒಂದು ಬಗೆಯ ಎಚ್ಚರದ ಸಂಶೋಧನೆ, ಕಾಳಜಿಯ ವಿಚಾರ ಮಂಡನೆ. ಕನ್ನಡದ ಮೊದಲ ಉಪಲಬ್ಧ ಕೃತಿ ಶಿವಕೋಟ್ಯಾಚಾರ್ಯನ ’ವಡ್ಡಾರಾಧನೆ’ಯ ಸಮಗ್ರ ಅಧ್ಯಯನವನ್ನು ಕೃತಿ ಒಳಗೊಂಡಿದೆ. 
ಲೇಖಕಿ ಪಿ. ಚಂದ್ರಿಕಾ ಕೃತಿಯ ಕುರಿತು ಹೇಳಿರುವುದು ಹೀಗೆ : ಕನ್ನಡದ ಜೈನ ಪರಂಪರೆಯ ಬಗ್ಗೆ ಅಪಾರವಾದ ಒಳನೋಟಗಳನ್ನು ಕೊಡುವ ಅವರ ಬರವಣಿಗೆ ಕನ್ನಡಕ್ಕೆ ಅನನ್ಯವಾದದ್ದೂ ಕೂಡಾ. ಕನ್ನಡದ ಪ್ರಾಮುಖ್ಯತೆಯನ್ನು ಎತ್ತಿತೋರುತ್ತಾ ಯಾವತ್ತೂ ಬಹುತ್ವದ ನಂಬಿಕೆಯಲ್ಲಿ ಬರೆಯುತ್ತಲಿರುವ ಹಂಪನಾ ವಿದ್ವತ್ ಜಗತ್ತಿನಲ್ಲಿ ಬಹು ಚರ್ಚಿತರಾದವರು. ಅವರು ಕೈಗೆತ್ತಿಕೊಂಡು ಬರೆದ ವಡ್ಡಾರಾಧನೆ ಸಮಗ್ರ ಅಧ್ಯಯನ ಪುನರ್‌ಮುದ್ರಣಗೊಳ್ಳುತ್ತಿರುವುದು ಸಂತಸದ ಸಂಗತಿ. ಹದಿನೇಳು ವರ್ಷಗಳ ಅವಧಿಯಲ್ಲಿ ಮಹತ್ವದ ಈ ಪುಸ್ತಕ ಮೊದಲಬಾರಿಗೆ ಪುನರ್‌ಮುದ್ರಣ ಆಗುತ್ತಿರುವುದು ವೈಯಕ್ತಿಕವಾಗಿ ನನಗೆ ಅಚ್ಚರಿಯ ಸಂಗತಿಯೇ. ಇಂಥಾ ಹೊತ್ತಿನಲ್ಲಿ ಕನ್ನಡದ ಓದುಗವರ್ಗದ ಆಯ್ಕೆಗಳ ಬಗ್ಗೆ ಅನೇಕ ಪ್ರಶ್ನೆಗಳನ್ನೂ, ಕುತೂಹಲವನ್ನೂ ಹುಟ್ಟುಹಾಕುತ್ತಿದೆ’ ಎಂದಿದ್ದಾರೆ. 

ಅಲ್ಲದೆ ’ವಡ್ಡಾರಾಧನೆ ಅನೇಕ ಕಾರಣಗಳಿಂದ ಕನ್ನಡದ ಮಹತ್ವದ ಕೃತಿ, ಉಪಸರ್ಗ ಕೇವಲಿಗಳ ಕಥೆ, ವಡ್ಡಕಥೆ ಎಂದೂ ಕರೆಯಲ್ಪಡುತ್ತಿದ್ದ ಈ ಕಥೆಗಳು ಜಿನಧರ್ಮದ ಸಾರವನ್ನು ಹೇಳುವಂಥದ್ದೇ ಆದರೂ ಕನ್ನಡದ ಕಥನ ಪರಂಪರೆಯಲ್ಲಿ ಈ ಕೃತಿಯು ಅನೇಕ ಕಾರಣಕ್ಕಾಗಿ ಈಗಲೂ ಆದ್ಯ ಕೃತಿಯಾಗಿದೆ. ಕನ್ನಡದ ಲಿಖಿತ ಮತ್ತು ಅಲಿಖಿತ ಪಠ್ಯಗಳ ಮಾದರಿಗಳ ನಡುವೆ ಸಿಗುವ ಈ ಕೃತಿ ಎರಡರ ಲಕ್ಷಣಗಳನ್ನೂ ಒಳಗೊಂಡಿದೆ. ನಿರ್ದಿಷ್ಟ ಚೌಕಟ್ಟಿನ ಒಳಗಿದ್ರೂ, ಅದನ್ನು ಮೀರುವ ಈ ಕೃತಿಯ ಕಥನ ಸ್ವರೂಪ, ನಿರೂಪಣೆ, ಕೃತಿಕೇಂದ್ರದ ವಿಕೇಂದ್ರೀಕರಣ ಎಲ್ಲವೂ ಈ ಹೊತ್ತಿಗೂ ಹೊಸ ಸವಾಲುಗಳನ್ನು ಒಡ್ಡುತ್ತಲೆ ಇವೆ. ಈ ಹೊತ್ತು ಬರೆಯುವವರಿಗೆ ಅದರ ಮಾದರಿ ಮತ್ತು ವಿನ್ಯಾಸ, ತಂತ್ರ ಮತ್ತು ನಿರೂಪಣೆ, ವಸ್ತು ನಿರ್ವಹಣೆ ಇಂಥಾ ಸೂಕ್ಷಾತಿಸೂಕ್ಷ್ಮ ಸಂಗತಿಗಳಲ್ಲಿ ಕೊಂಚ ಹೊತ್ತು ವಿರಮಿಸಿದರೂ ಹೊಸ ಚೈತನ್ಯಪೂರ್ಣವಾದ ಬರವಣಿಗೆ ಸಾಧ್ಯವಾದೀತು’ ಎಂಬ ಮೆಚ್ಚುಗೆಯ ಮಾತು ಅವರವು. 

About the Author

ಹಂಪ ನಾಗರಾಜಯ್ಯ
(07 October 1936)

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು.   ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...

READ MORE

Related Books