ವಾಗ್ಭೂಷಣ

Author : ಟಿ. ಕೇಶವ ಭಟ್ಟ

Pages 302

₹ 200.00




Year of Publication: 2003
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಹಳೆಗನ್ನಡ ಮತ್ತು ವಿವಿಧ ಬಗೆಯ ಶಾಸ್ತ್ರ ಶಾಖೆಗಳಲ್ಲಿ ಆಳವಾದ, ಅಪಾರ ಜ್ಞಾನ ಹೊಂದಿರುವ ಟಿ. ಕೇಶವಭಟ್ಟ ಇವರ ಹಲವು ಬರಹಗಳ ಸಂಗ್ರಹವನ್ನು 'ವಾಗ್ಬೂಷಣ' ಕೃತಿಯ ಮೂಲಕ ಓದುಗರಿಗೆ ಅರ್ಪಿಸಲಾಗಿದೆ. ಈ ಕೃತಿಯಲ್ಲಿ ಭಾಷೆಗೂ ಸಮಾಜಕ್ಕೂ ಇರುವ ಸಂಬಂಧಗಳನ್ನು, ಪರಂಪರೆಗೂ ವ್ಯಾಕರಣಕ್ಕೂ ಇರುವ ಹೋಲಿಕೆಯನ್ನು ಸಮಂಜಸವಾಗಿ, ಕಳಕಳಿಯಿಂದ, ತುಂಬಾ ಗಮನಕೊಟ್ಟು ತುಂಬಾ ಎಚ್ಚರಿಕೆ ವಹಿಸಿ ಇಲ್ಲಿ ಈ ಕೃತಿಯಲ್ಲಿ ಅಚ್ಚುಮಾಡಲಾಗಿದೆ.ಇದು ಓದುಗರಿಗೆ ಹೊಸ ತರದ ಆಲೋಚನೆಯನ್ನು ಕಂಡುಕೊಡುವಲ್ಲಿ ಈ ಕೃತಿಯೂ ಯಶಸ್ವಿಯಾಗಿದೆ. ಟಿ. ಕೇಶವ ಭಟ್ ಅವರ ಕನ್ನಡ, ಸಂಸ್ಕ್ರತ, ಇಂಗ್ಲಿಷ್ ಭಾಷ ಸಾಹಿತ್ಯಗಳ ಒಟ್ಟು ರೂಪವನ್ನು ಈ ಕೃತಿ ಮೂಲಕ ಟಿ. ಕೇಶವ ಭಟ್ ಅವರು ಯಶಸ್ವಿಯಾಗಿದ್ದಾರೆ.

About the Author

ಟಿ. ಕೇಶವ ಭಟ್ಟ
(02 February 1920 - 20 August 2005)

ಕವಿಯಾಗಿದ್ದ ಟಿ. ಕೇಶವಭಟ್ಟ ಅವರು ಛಂದಸ್ಸು, ವ್ಯಾಕರಣ, ಅಲಂಕಾರ ಸೇರಿದಂತೆ ಕನ್ನಡ ಸಾಹಿತ್ಯದ ಶಾಸ್ತ್ರ ವಿಭಾಗದಲ್ಲಿ ಮಹತ್ವದ ವಿದ್ವಾಂಸರಾಗಿದ್ದರು. ಅವರು ಹುಟ್ಟೂರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ. 1920ರ ಫೆಬ್ರುವರಿ 2 ರಂದು ಜನಿಸಿದರು. ಕೃಷಿಕರಾಗಿದ್ದ ತಂದೆ ಗೋವಿಂದ ಭಟ್ಟರು ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲಿಯೂ ಆಸಕ್ತರಾಗಿದ್ದರು. ಅವರ ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಪೆರೋಡಿಯಲ್ಲಿ ಪಡೆದರು. ಹೈಸ್ಕೂಲು ಸೇರಿ ಎಂಟನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಬೇಕಾಯಿತು. ಕಾಸರಗೋಡು ಬೋರ್ಡ್‌ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿ ...

READ MORE

Related Books