ವೈದ್ಯ ಅರಿತ ಬದುಕಿನ ಸತ್ಯಗಳು

Author : ಟಿ.ವಿ. ಚಂದ್ರಶೇಖರ್

Pages 120

₹ 130.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷ, ಕೆಇಬಿ ಆಫೀಸ್ ಎದುರುಗಡೆ, ಇಟ್ಟಮಡು ಮುಖ್ಯರಸ್ತೆ, ಬನಶಂಕರಿ 3ನೆ ಹಂತ, ಬೆಂಗಳೂರು- 560085
Phone: 9739561334

Synopsys

ಡಾ.ಟಿ.ವಿ. ಚಂದ್ರಶೇಖರ್ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂಬುದು ಜೀವನಾನುಭವದ ಚಿಂತನೆಗಳನ್ನುಒಳಗೊಂಡ ಕೃತಿ. ಬದುಕು ಮತ್ತು ಬದುಕಿನಾಚೆಗಿನ ಸತ್ವಯುತ ಸತ್ಯಗಳನ್ನು ಬಿಚ್ಚಿಡುವ ಸೃಜನಶೀಲ ಕೃತಿ ಇದು. ವಿಮರ್ಶಕ ಪ್ರೊ.ಸುರೇಶ ಮುದ್ದಾರ ಹೇಳುವಂತೆ ‘ವೃತ್ತಿಯಲ್ಲಿ ವೈದ್ಯರಾಗಿದ್ದು, ವೈದ್ಯಕೀಯ ಬದುಕನ್ನು ಆಳವಾಗಿ ಗ್ರಹಿಸುವುದು ಸುಲಭ.ಆದರೆ ಇಡೀ ಮಾನವನ ಬದುಕಿನ ಕುರಿತು ಬರೆಯುವುದು ಸುಲಭವಲ್ಲ. ಅಂತಹ ವಿಭಿನ್ನ ಕೆಲಸವನ್ನು ಡಾ.ಟಿ.ವಿ. ಚಂದ್ರಶೇಖರ್ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಶ್ರೀಧರ ಬನವಾಸಿ ಅವರು ಕೃತಿಗೆ ಬೆನ್ನುಡಿ ಬರೆದಿದ್ದು, ಈ ಕೃತಿಯು ಪರಿಪೂರ್ಣತೆಯಿಂದ ಕೂಡಿದ ಜೀವನ ವಿಜ್ಞಾನ, ಬದುಕಿನ ಮಹತ್ವದ ಅರಿವು ಮೂಡಿಸುವ ದೀವಿಟಿಗೆಯಾಗಿದೆ. ವೃತ್ತಿಯಲ್ಲಿ ವೈದ್ಯರಾದರೂ, ಚಂದ್ರಶೇಖರ ಅವರೊಳಗೊಬ್ಬ ಜೀವನದ ಸತ್ವಗಳನ್ನು ಹುಡುಕುವ ಸಂಶೋಧಕನಿದ್ದಾನೆ’ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ. 

‘ಡಾ.ಟಿ.ವಿ. ಚಂದ್ರಶೇಖರ್ ಅವರು ಸದ್ಯ, ನಿವೃತ್ತರಾದರೂ  ಅವರನ್ನು ಬರವಣಿಗೆಯ ಲೋಕಕ್ಕೆ ಕರೆತಂದದ್ದು ಅದೇ ಅಕ್ಷರ ಪ್ರೀತಿ , ಕೃತಿಯಲ್ಲಿರುವ ಮುತ್ತಿನ ಸಾಲುಗಳು ನಿಜವಾಗಿಯೂ ಬೋಧನೆಯಲ್ಲ. ಬದಲಾಗಿ, ಹೊತ್ತಗೆಯ ಹೆಸರೇ ಹೇಳುವಂತೆ ಇವು ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂದು ಹಿರಿಯ ಪತ್ರಕರ್ತ ಚೆನ್ನಮಲ್ಲಿಕಾರ್ಜುನ ಹದಡಿ ಹೇಳಿದ್ದಾರೆ. 

About the Author

ಟಿ.ವಿ. ಚಂದ್ರಶೇಖರ್

ಡಾ.ಟಿ. ವಿ. ಚಂದ್ರಶೇಖರ್ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ (ಪಿಸಿಎಂ) ಪಾಸು ಮಾಡಿ, ಆ ನಂತರ ಸರಕಾರಿ ಕಾನೂನು ಕಾಲೇಜಿನಲ್ಲಿಎಲ್.ಎಲ್.ಬಿ ಪದವಿ ಪಡೆದರು. ತಾಯಿಯ ಪ್ರೇರಣೆ ಹಾಗೂ ಒತ್ತಾಸೆಯ ಮೇರೆಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದರು. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಕೆಲವು ವರ್ಷ ಕಾಲ ವೈದ್ಯರಾಗಿ, ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1970ರ ದಶಕದಲ್ಲಿ, ಡಾ. ಕಮಲಾ ಅವರನ್ನು ವಿವಾಹವಾಗಿ, ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಎಫ್‌ಎಫ್‌ಎಆರ್‌ಸಿಎಸ್‌ಐ (FFARCSI: Fellowship in Anaesthesia Royal College of Surgeons and Physicians, Dublin Republic of Ireland) ...

READ MORE

Related Books