ವೈದ್ಯ ಮಂಥನ

Author : ರಣಜಿತ ಬೀರಣ್ಣ ನಾಯ್ಕ ಕೆಂಚನ್‌

Pages 230

₹ 195.00
Year of Publication: 2021
Published by: ಸಪ್ನ ಬುಕ್ ಹೌಸ್ ಪ್ರೈ.ಲಿ
Address: ಆರ್.ಒ #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9
Phone: 08040114455

Synopsys

ವೃತ್ತಿಯಲ್ಲಿ ವೈದ್ಯರಾಗಿರುವ ರಣಜಿತ ಬೀರಣ್ಣ ನಾಯ್ಕ ಅವರು ವೈದ್ಯ ಸಂಬಂಧಿತ ಕೃತಿಗಳ ರಚನೆ ಮಾಡುವ ಮೂಲಕ ಜನಸಾಮಾನ್ಯರ ಅನೇಕ ವೈದ್ಯಕೀಯ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಅವರ ಕೃತಿ ವೈದ್ಯ ಮಂಥನ ಇಂತಹದೇ ಒಂದು ಬರಹಗಳ ಸಂಗ್ರಹವಾಗಿದೆ. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ರಣಜಿತ ಬೀರಣ್ಣ ನಾಯ್ಕ ಕೆಂಚನ್‌

ಉತ್ತರ ಕನ್ನಡ ಜಿಲ್ಲೆ ಕುಮುಟಾ ತಾಲ್ಲೂಕಿನ ಹಿರೇಗುತ್ತಿಯವರಾದ ಡಾ. ರಣಜಿತ ಬೀರಣ್ಣ ನಾಯ್ಕ ಕೆಂಚನ್‌ ಅವರು ವೃತ್ತಿಯಲ್ಲಿ ವೈದ್ಯರು. ಜಗದ್ಗುರು ಮುರುಗರಾಜೇಂದ್ರ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು ಪ್ರಸ್ತುತ ಜೈಪುರದಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ವೈದ್ಯಕೀಯ ವಿಷಯದ ಕುರಿತು ಕೃತಿಗಳನ್ನು ರಚಿಸಿದ್ದಾರೆ. ವೈದ್ಯ-ದರ್ಪಣ ಇವರು ರಚಿಸಿದ ಕೃತಿಯಾಗಿದೆ.  ...

READ MORE

Related Books