ವೈವಿಧ್ಯ

Author : ಶಾರದಾ ವಿ. ಮೂರ್ತಿ

Pages 236

₹ 150.00




Year of Publication: 2008
Published by: ವಿಜಯ ಸಾಹಿತ್ಯ ಪ್ರಕಾಶನ
Address: 82/3, ಗಂಧದಗುಡಿ ರಸ್ತೆ, ಸುಂಕೇನಹಳ್ಳಿ, ಹನುಮಂತನಗರ, ಬೆಂಗಳೂರು- 560019
Phone: 22421020

Synopsys

‘ವೈವಿಧ್ಯ’ ಲೇಖಕಿ ಶಾರದಾ ವಿ. ಮೂರ್ತಿ ಅವರ ಹಾಸ್ಯ ಲೇಖನಗಳು, ಒಂದೆರಡು ಲಲಿತ ಪ್ರಬಂಧಗಳು, ಹಾಗೂ ಕಿರುಲೇಖನಗಳ ಸಂಕಲನ. ಇಲ್ಲಿಯ ಕೆಲವು ಲೇಖನಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರವಾಗಿದ್ದರೆ, ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಅವರು ಬರೆದ ವಿವಿಧ ಬರಹಗಳನ್ನು ಈ ಕೃತಿಯಲ್ಲಿ ವೈವಿಧ್ಯಮಯವಾಗಿ ಸಂಗ್ರಹಿಸಿ ಪ್ರಕಟಿಸಲಾಗಿದೆ.

About the Author

ಶಾರದಾ ವಿ. ಮೂರ್ತಿ
(18 February 1956)

ಶಾರದಾ ಅವರು ಮೂಲತಃ ಶಿವಮೊಗ್ಗದವರು. ತಂದೆ- ಜೆ.ಎಲ್. ರಂಗಾಭಟ್ಟರು, ತಾಯಿ- ಮಹಾಲಕ್ಷ್ಮಮ್ಮ. ಶಿಶು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿರುವ ಲೇಖಕಿ ಶಾರದಾ ವಿ. ಮೂರ್ತಿ. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧಗಳ ರಚನೆಯಿಂದ ಮಕ್ಕಳ ಮನೋವಿಕಾಸಕ್ಕೆ ಕಾಣ್ಕೆ ನೀಡಿದ್ದಾರೆ. ಓದಿನ ಹಂತದಲ್ಲೇ ಶಿಶುಸಾಹಿತ್ಯದೆಡೆಗೆ ಆಕರ್ಷಿತರಾದವರು. ಬರವಣಿಗೆ ಫಲಿಸುತ್ತಲೇ ಅದನ್ನೇ ಉಸಿರಾಗಿಸಿ ಕೊಂಡವರು. ಬೆಳ್ಳಿಚುಕ್ಕಿ, ಸ್ನೇಹಸೌರಭ, ಅನನ್ಯ, ಅರ್ಥ, ಮಿಡಿದ ಹೃದಯ, ಗೆಲುವು, ಆಂತರ್ಯ, ನಿರ್ಧಾರ ಮತ್ತಿತರ ಕಾದಂಬರಿಗಳನ್ನು ರಚಿಸಿದ್ದಾರೆ. ದಿಶ, ಮೌಲ್ಯ, ಹೊಂಬೆಳಗು, ಬಾಂಧವ್ಯ, ಶೋಧ, ಬೇರು, ಹಾಗೂ ಅನುಬಂಧ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮಾತಾಡಿ ಗೊಂಬೆಗಳೆ, ...

READ MORE

Related Books