ವೈವಿಧ್ಯದ ತೊಟ್ಟಿಲು

Author : ಮಾಧವ ಐತಾಳ್

Pages 116

₹ 120.00




Year of Publication: 2021
Published by: ಋತ
Address: ಬೆಂಗಳೂರು

Synopsys

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿಯುಳ್ಳ ಲೇಖಕ ಮಾಧವ ಐತಾಳ್ ಅನುವಾದಿಸಿರುವ ಕೃತಿ ಇದು. ಪಾಂಡುರಂಗ ಹೆಗಡೆ, ಸತೀಶ್ ಚಂದ್ರನ್ ನಾಯರ್‍, ಮಾಧವ್ ಗಾಡ್ಗೀಳ್, ವಂದನಾ ಶಿವ, ಕ್ಲಾಡ್ ಅಲ್ವಾರೆಸ್, ರಿತ್ವಿಕ್ ದತ್ತ, ರೊಮುಲಸ್ ವಿಟೇಕರ್‍, ನಿತಿನ್ ಡಿ ರೈ, ವಿಜು ಬಿ, ಕಮಲಾಕರ್‍ ಬಟ್ ಮತ್ತು ಹೆಚ್ ಎ ಕಿಶೋರ್‍ ಕುಮಾರ್‍ ಅವರು ಬರೆದಿರುವ ಲೇಖನಗಳ ಅನುವಾದವನ್ನು ಇಲ್ಲಿ ಒಟ್ಟಿಗೆ ಸೇರಿಸಿ ಈ ಕೃತಿಯನ್ನು ಸಂಫಾದಿಸಿದ್ದಾರೆ ಐತಾಳ್ ಅವರು. “ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ದೀರ್ಘ ಕಾಲದಿಂದ ಸಂಶೋಧನೆ, ಕ್ಷೇತ್ರಕಾರ್ಯ ಹಾಗೂ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು / ಕಾರ್ಯಕರ್ತರು ಬರೆದ ಈ ಪುಸ್ತಕ ಮುಂಬರುವ ಜನಾಂದೋಲನಗಳಿಗೆ ಉಪಯುಕ್ತವಾಗಲಿದೆ; ಮುನ್ನಡೆಯಬೇಕಾದ ದಾರಿಗಳನ್ನು ತೋರಿಸಲಿದೆ ಎಂಬುದು ನನ್ನ ನಂಬಿಕೆ” ಎಂದು ಬೆನ್ನುಡಿಯಲ್ಲಿ ಶಶಾಂಕ್ ಎಸ್ ಆರ್‍ ಹೇಳಿದ್ದಾರೆ.

About the Author

ಮಾಧವ ಐತಾಳ್

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕ. ಹದಿನೈದಕ್ಕೂ ಕೃತಿಗಳನ್ನು ರಚಿಸಿದ್ದಾರೆ. ‘ಋತ’ ಎಂಬ ದ್ವೈಮಾಸಿಕ ಕೂಡ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದು, ಈಗಾಗಲೇ ಹಲವಾರು ವಿಚಾರಗಳ ಕುರಿತು ಸಂಚಿಕೆಗಳು ಬಂದಿವೆ. ಅಕ್ಷರ ಪ್ರಕಾಶನದಿಂದ ಪ್ರಕಟವಾಗಿರುವ ಜಾಗತಿಕ ಪರಿಸರ ಚರಿತ್ರೆ, ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಬತ್ತದ ಚಿಲುಮೆ, ಪಶ್ಚಿಮ ಘಟ್ಟಗಳ ಕಥೆ ಹೇಳುವ ವೈವಿಧ್ಯದ ತೊಟ್ಟಿಲು ಸೇರಿದಂತೆ 16 ಕೃತಿಗಳನ್ನು ಮಾಧವ ಐತಾಳ್ ಬರೆದಿದ್ದಾರೆ. ...

READ MORE

Related Books