ಅರವತ್ತರ ವಸಂತ

Author : ಎನ್. ಜಗನ್ನಾಥ ಪ್ರಕಾಶ್

Pages 102

₹ 150.00




Year of Publication: 2017
Published by: ಹಣತೆ ಪ್ರಕಾಶನ,
Address: ಹಣತೆ ಪ್ರಕಾಶನ, ಬಿ.ಎಂ.ಪಾಳ್ಯ, ಬೆಂಗಳೂರು-75

Synopsys

ಕನ್ನಡ ಏಕೀಕರಣವಾಗಿ 60 ವರ್ಷ ಕಳೆದವು . ಕನ್ನಡನಾಡು ಏದುರಿಸಿದ ಸಮಸ್ಯೆ,ಸವಾಲುಗಳನ್ನು ಅವಲೋಕಿಸಿ ನೋಡಿದಾಗ ಹೆಮ್ಮೆ, ಕಳವಳ ಸಹಜ.ಇಲ್ಲಿನ,ಸಮಾಜಿಕ,ರಾಜಕೀಯ,ಶೈಕ್ಷಣಿಕ,ಹಾಗು ಅರ್ಥಿಕ ಅಭಿವೃದ್ದಿಯನ್ನು ವಿಮರ್ಷೆಗೆ ಒಳಪಡಿಸಲಾಗಿದೆ.ಕನ್ನಡ ಸಿನಿ ಜಗತ್ತಿನ ಚರಿತ್ರೆಯನ್ನು ವಿವರಿಸಲಾಗಿದೆ.ಕನ್ನಡ ಚಿತ್ರರಂಗ ವರ್ತಮಾನ, ವೈವಿಧ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.ಇದು ಓದುವ ಕೃತಿ ಮಾತ್ರವಲ್ಲ ನೋಡಬೇಕಾದ ಚಿತ್ರಶಾಲೆಯೂ ಆಗಿದೆ.ಸಿನಿಮಾದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ.ರೀಲುಗಳ ಲೋಕದ ತವಕ ತಲ್ಲಣ, ಪ್ರಯೋಗಗಳು ಇದೆಲ್ಲವನ್ನೂ ಹಿಡಿದಿಡಲು ಲೇಖಕರು ಈ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ

About the Author

ಎನ್. ಜಗನ್ನಾಥ ಪ್ರಕಾಶ್
(25 May 1955)

ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎನ್. ಜಗನ್ನಾಥ ಪ್ರಕಾಶ್ ಅವರು ಮೂಲತಃ ಕೋಲಾರದವರು. ಅವರು 1955ರ ಮೇ 25ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಅವರು ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರಾದರು.  ಪತ್ರಿಕೋದ್ಯಮದಲ್ಲಿ ವೃತ್ತಿ ಆರಂಭಿಸಿದ ಪ್ರಕಾಶ್ ಅವರು ಮುಂಜಾನೆ ಮತ್ತು ಕೋಲಾರ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ವಾರ್ತಾ ಇಲಾಖೆಯಲ್ಲಿ ಇನ್ಫಾಮೇಶನ್ ಅಸಿಸ್ಟೆಂಟ್ ಎಂದು ಕೆಲಸಕ್ಕೆ ಸೇರಿದ ಅವರು ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೆಲಕಾಲ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಆಗಿದ್ದ ಜಗನ್ನಾಥ ಪ್ರಕಾಶ್ ಅವರು ’ಕೋಲಾರ ಸಿರಿಸಂಪುಟ’, ...

READ MORE