ವನಸುಮ ಕಥಾ ಸಂಕಲನ

Author : ಪ್ರೀತಿ ಭರತ್‌ ಜವಳಿ

Pages 152

₹ 156.00




Year of Publication: 2022
Published by: ಪ್ರೀತಿ ಭರತ್‌
Address: ಪ್ರೀತಿ ಭರತ್‌ ಶಂಕರ್‌ ಮಠ ಬೆಂಗಳೂರು 560 086
Phone: 9108404816

Synopsys

ಪ್ರೀತಿಭರತ್‌ ಅವರಿಗೂ ಕಥೆಗಳಿಗೂ ಬಲುನಂಟು, ಈಗಾಗಲೇ ಪ್ರೀತಿಭರತ್‌ ಅವರ ಸಂಜೆ ಮಲ್ಲಿಗೆ (ಕಥಾಸಂಕಲನ) 2015, ಹಾಗೂ ಪ್ರೇಮ ಪಾರಿಜಾತ (ಕಥಾಸಂಕಲನ) 2020ರಲ್ಲಿ ಪ್ರಕಟವಾಗಿದೆ. ಪ್ರಸ್ತುತ ಇದು ಕೂಡ ಕಥಾಸಂಕಲನ ವಾಗಿದೆ. ಹೂವಿನ ಹುಡುಗಿ ವಸಂತ, ನಮಿತ ಅವರುಗಳ ಪ್ರೇಮಪ್ರಕರಣ, ಅನೈತಿಕ ಪ್ರೇಮಪ್ರಕರಣಗಳಿಂದಾಗುವ ದುಷ್ಪರಿಣಾಮವನ್ನು ಈ ಕಥೆ ಹೇಳುತ್ತದೆ. ವಸಂತನಿಗೆ ನಮಿತಾಳ ಮೇಲೆ ಆಕರ್ಷಣೆ, ಮೋಹ, ವ್ಯಾಮೋಹ, ಅನೈತಿಕ ಸಂಬಂಧ ಅನರ್ಥಕ್ಕೆ ದಾರಿ ಎಂದು ತಿಳಿಸುವ ಕಥೆ ಇದಾಗಿದೆ. ಕವಿಯ ಅಳಲು : ಮಂಗೇಶಿಗೆ ಕನ್ನಡದ ಬಗ್ಗೆ ಆಸಕ್ತಿ. ಆದರೆ ಅವನ ಹೆಂಡತಿ ಮಲ್ಲಿಗೆ ಬಂಗಾರದ ತಾಳಸರ, ಕಾಲುಂಗುರದ ಮೇಲೆ ಆಸೆ. ಕೊಡಿಸಿದ ಆಮೇಲೆ ಮಲ್ಲಿ ಸುಮ್ಮನಾದಳು. ಇಲ್ಲಿ ಕವಿ ಮದುವೆಯ ನಂತರ ಆದ ಅನುಭವ ಹೇಳಿಕೊಂಡಿದ್ದಾನೆ. ನೀಲಿಕಣ್ಣಿನ ಹುಡುಗಿ : ಪ್ರೇಮ ಕಥೆ, ತೇಜು ಮಂದಾರಳನ್ನು ಮದುವೆಯಾಗಿ ಕ್ಲೀಪ್‌ವೆಲ್ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಅಪ್ತ ಸಲಹೆ ಮಂದಾರಳಿಂದ ತಾಜುವಿನ ಜೀವನ ಸುಂದರ ನೀಲಿ ಆಗಿದೆ. ದಂಪತಿಗಳ ಕಥೆ ಇದಾಗಿದೆ. ಇದು ಫ್ಯಾಂಟಿಸಿ ನಿಜ ಆಗುವ ಕಥೆ. ಇದು ನಿದ್ರಾಹೀನತೆ ಬಗ್ಗೆ ಬೆಳಕು ಚೆಲ್ಲಿದೆ. ಚಂದಿಹುಡುಗ : ರಾಜು ಚಿಂದಿ ಹುಡುಗನಾದರೂ ತನ್ನ ಸ್ವಂತ ದುಡಿಮೆ ಪ್ರತಿಭೆಯಿಂದ ಉನ್ನತ ಸ್ಥಾನವೇರಿ ನೂರು ಜನರಿಗೆ ಧ್ವನಿಯಾದ, ದುಡಿಮೆಯೇ ಪ್ರಾಮುಖ್ಯತೆ ತಿಳಿಯುತ್ತದೆ ರಾಜುವಿನ ಸಾಧನೆ ಒದುಗರ ಮೆಚ್ಚುಗೆ ಗಳಿಸುತ್ತದೆ.

About the Author

ಪ್ರೀತಿ ಭರತ್‌ ಜವಳಿ

ಪ್ರೀತಿ ಭರತ್‌ ಜವಳಿ  ಮೂಲತಃ ಧಾರವಾಡದವರು. ಗೋವಾ, ಬೆಳಗಾಂ ,ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾ ಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.  ಅವರು ಕನ್ನಡ ಪರ ಹೋರಾಟ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷೆ, ಸಂಚಾಲಕಿಯಾಗಿ ಸೇವೆಸಲ್ಲಿಸಿದ್ದಾರೆ. ಆಶು ಕವಿತೆ, ಭಾಷಣ, ಲೇಖನಗಳಲ್ಲಿ ಆಸಕ್ತಿ ಹೊಂದಿರುವ ಅವರು  ಕಥೆ, ಕಾವ್ಯ ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಟೈಮ್ಸ್  ಆಫ್‌ ಇಂಡಿಯಾ ಪತ್ರಿಕೆಯಲ್ಲಿಯೂ  ಅವರ ಇಂಗ್ಲಿಷ್ ಕಥೆ ಕಾವ್ಯ ಲೇಖನಗಳು ಪ್ರಕಟಗೊಂಡಿವೆ.  ಪ್ರಶಸ್ತಿಗಳು: ನಾಡ ರತ್ನ, ರಾಷ್ಟ್ರೀಯ ಪ್ರಶಸ್ತಿ,  ದತ್ತಿ ಪ್ರಶಸ್ತಿ, ಬಸವ ರಾಷ್ಟೀಯ ಪ್ರಶಸ್ತಿ. ಕೃತಿಗಳು: ಕೆಂಡ ಸಂಪಿಗೆ,  ಪ್ರೇಮ ಪಾರಿಜಾತ, ವನಸುಮ, ಕುಹೂ ಕುಹೂ ಕೋಗಿಲೆ,  ಸಿಂಹದ ನೀತಿ ಮತ್ತು ಇತರೆ ಕತೆಗಳು.    ...

READ MORE

Related Books