ವರಪ್ರದಾನ

Author : ಕಂದಗಲ್ಲ ಹನಮಂತರಾಯ

Pages 172

₹ 21.00




Year of Publication: 1996
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560031
Phone: 080-22107733

Synopsys

ಆರಂಭದಲ್ಲಿ ವಿಜಯ ನಗರ ಸಾಮ್ರಾಜ್ಯದ ಸ್ಥಾಪನೆಯ ದಿನಗಳ ಕುರಿತು ಐತಿಹಾಸಿಕವಾಗಿರುವ ಈ ನಾಟಕವನ್ನು ಹಿರಿಯ ನಾಟಕಕಾರರಾದ ಕಂದಗಲ್ಲು ಹಣುಮಂತರಾಯರು ಈ ಕೃತಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ. ಒಟ್ಟು ಈ ನಾಟಕ ಕೃತಿಯು ರಾಷ್ಟ್ರಭಿಮಾನ,ನಾಡಾಭಿಮಾನ ವಿವರಿಸುತ್ತಾ, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ರೀತಿಯ ಹೋರಾಟಗಳು, ನಂತರ ಕರ್ನಾಟಕ ಏಕೀಕರಣ ಚಳುವಳಿಗೆ ಪರೋಕ್ಷವಾಗಿ ನೀಡಿದ ಒಟ್ಟು ವಿಷಯಗಳ ಕುರಿತು ಮೂಡಿಬಂದಿದೆ. ಸ್ವಾತಂತ್ರ್ಯ , ಹಾಗು ರಾಜ್ಯ ಏಕೀಕರಣದ ಹಲವು ಆಯಾಮಗಳನ್ನು ವಿವರಿಸುತ್ತದೆ.

About the Author

ಕಂದಗಲ್ಲ ಹನಮಂತರಾಯ
(11 January 1896 - 13 May 1966)

ಪ್ರಸಿದ್ಧ ನಾಟಕಕಾರ ಕಂದಗಲ್ ಹನುಮಂತರಾಯರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬೀಳಗಿ ತಾಲೂಕಿನ ಕಂದಗಲ್ಲಿನಲ್ಲಿ. ತಂದೆ-ಭೀಮರಾಯರು, ತಾಯಿ-ಗಂಗೂಬಾಯಿ. ಕನ್ನಡದ ಶೇಕ್ಸ್ ಪಿಯರ್ ಎಂದೇ ಹೆಸರಾಗಿದ್ದ ಹನುಮಂತರಾಯರ ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ ಪೂರ್ಣಗೊಂಡರೆ ಮಾಧ್ಯಮಿಕ ಶಿಕ್ಷಣವನ್ನು ವಿಜಾಪುರದಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದ ಅವರು ನಾಟಕದತ್ತ ಹೆಚ್ಚು ಆಸಕ್ತರಾದರು. ಗಣೇಶೋತ್ಸವಕ್ಕಾಗಿ ಚೌತಿಚಂದ್ರ, ಸುಕನ್ಯ, ಭಕ್ತಧ್ರುವ, ಸತ್ಯವಾನ ಸಾವಿತ್ರಿ, ಕೃಷ್ಣ ಸುಧಾಮ, ತರಲಿಟೊಪಿಗಿ ಮುಂತಾದ ಏಕಾಂಕ ನಾಟಕಗಳನ್ನು ರಚಿಸಿ ಪ್ರದರ್ಶನ ಏರ್ಪಡಿಸುತ್ತಿದ್ದರು. ಇದೆಲ್ಲದರ ಜೊತೆಗೆ ಕೆರೂರು ವಾಸುದೇವಾಚಾರ್ಯರ ಕೃತಿಗಳಿಂದ ಪ್ರೇರಿತರಾದ ಅವರು ತಾನೂ ನಾಟಕಕಾರರಾಗಬೇಕೆಂಬ ಆಸೆಯನ್ನು ...

READ MORE

Related Books