ವಾರಸುದಾರಾ (ನಾಟಕ)

Author : ಜಯರಾಮ್ ರಾಯಪುರ

Pages 120

₹ 100.00




Year of Publication: 2021
Published by: ಸಮಾಜಮುಖಿ ಪ್ರಕಾಶನ
Address: #111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡ್, ಲಾಲ್‌ಬಾಗ್ ರಸ್ತೆ, ಬೆಂಗಳೂರು.
Phone: 9606934018

Synopsys

‘ವಾರಸುದಾರಾ’ ಕೃತಿಯು ಜಯರಾಮ್ ರಾಯಪುರ ಅವರ ನಾಟಕ ಕೃತಿಯಾಗಿದೆ. ಶಹಜಹಾನನ ವಾರಸುದಾರಿಕೆಗೆ ಜರುಗಿದ ಮಕ್ಕಳ ನಡುವಿನ ಸಂಘರ್ಷದ ಐತಿಹಾಸಿಕ ನಾಟಕವಾಗಿ ಈ ಕೃತಿಯು ಹೊರಹೊಮ್ಮಿದೆ. ಐತಿಹಾಸಿಕ ಘಟನೆಗಳೇ ಈ ಕೃತಿಯ ಜೀವಾಳವಾಗಿದ್ದು, ಯುದ್ಧ, ರಾಜಪಟ್ಟ ಹೀಗೆ ಅನೇಕ ಘಟನಾವಳಿಗಳ ಸುತ್ತ ಕತೆಯನ್ನು ಕಟ್ಟಲಾಗಿದೆ. ಇಲ್ಲಿ ಶಹಜಹಾನನ ಕಾರ್ಯವೈಖರಿಯನ್ನು ಲೇಖಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಘಟನಾ ಪ್ರಧಾನ ರಚನೆಯನ್ನು ಹೊಂದಿರುವ ಈ ನಾಟಕ ಕೃತಿ ಈಗಾಗಲೇ ಹಲವಾರು ಪ್ರದರ್ಶನವನ್ನು ಕಂಡಿರುತ್ತದೆ. ನಾಟಕವು ನಾಲ್ಕು ಅಂಕ ಮತ್ತು ಹದಿನಾರು ದೃಶ್ಯಗಳಿಂದ ಕೂಡಿದ ಸುಮಾರು ನೂರುಪುಟಗಳ ಒಂದು ಪೂರ್ಣಾವಧಿ ನಾಟಕವಾಗಿದೆ.  ಮೊದಲ ಅಂಕಗಳ ಐದು ದೃಶ್ಯಗಳ ‘ಆಶಾಂತಿ ಪರ್ವ’, ಎರಡನೆಯ ಅಂಕದ ಏಳು ದೃಶ್ಯಗಳ ‘ಯುದ್ದಪರ್ವ ’ ಮೂರನೇ ಅಂಕದ ಏಳು ದೃಶ್ಯಗಳ ದ್ವೇಷಪರ್ವ’ ಹಾಗೂ ನಾಲ್ಕನೇ ಅಂಕದ ಒಂದು ದೃಶ್ಯದ  ‘ಕೊನೆಯ ಮೊದಲ ಪರ್ವ’ , ಹೀಗೆ ನಾಟಕಕಾರರು ನಾಟಕದ ನಾಲ್ಕು ಅಂಕಗಳನ್ನು ನಾಲ್ಕು ಪರ್ವಗಳನ್ನಾಗಿಸಿಕೊಂಡಿದ್ದಾರೆ. ನಾಟಕದ ಬಂಧವನ್ನು ಹಾಗೆ ಮಾಡುವುದರ ಮೂಲಕ ನಾಟಕಕಾರರು ಭಾರತದ ಮಧ್ಯಕಾಲೀನ ಇತಿಹಾಸದ ಮುಸ್ಲಿಂ ಆಡಳಿತಗಾರರಲ್ಲಿ ಅಧಿಕಾರಕ್ಕಾಗಿ ನಡೆ ದಾಯಾದಿಗಳ ಸಂಘರ್ಷದ ರೀತಿಯಲ್ಲಿ ಗ್ರಹಿಸಬಹುದೇನೋ ಎಂಬುದನ್ನು ನಾಟಕದಲ್ಲಿ ಸೂಚಿಸುತ್ತಾರೆ. 

About the Author

ಜಯರಾಮ್ ರಾಯಪುರ

ಜಯರಾಮ್ ರಾಯಪುರ ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನೈಯಲ್ಲಿ ವಾಸವಾಗಿದ್ದಾರೆ. ಕೃತಿಗಳು: ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ, ಸಿರಿಗೆ ಸೆರೆ (ಕೆಂಪೇಗೌಡ ಕುರಿತ ಐತಿಹಾಸಿಕ ನಾಟಕ) ...

READ MORE

Related Books