ವರ್ತಮಾನದ ಧೂಳು

Author : ಶೋಭಾ ನಾಯಕ

Pages 92

₹ 100.00
Year of Publication: 2021
Published by: ಸಂಕಥನ
Address: ನಂ 72, ಭೂಮಿಗೀತ, 6th ಕ್ರಾಸ್, ಉದಯಗಿರಿ, ಮಂಡ್ಯ - 571401
Phone: 9886133949

Synopsys

ಗೋಬಿಂದ ಪ್ರಸಾದ ಅವರ ಆಯ್ದ ಹಿಂದಿ ಕವಿತೆಗಳನ್ನು ಲೇಖಕಿ ಶೋಭಾ ನಾಯಕ ಅವರು ಅನುವಾದಿಸಿದ ಕೃತಿ ‘ವರ್ತಮಾನದ ಧೂಳು’. ಕೃತಿಗೆ ಬೆನ್ನುಡಿ ಬರೆದ ಪುರುಷೋತ್ತಮ ಬಿಳಿಮಲೆ ಅವರು ‘ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ, ದ್ವೇಷ, ನಿರಾಸೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಠಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books