ವಠಾರ ಮೀಮಾಂಸೆ

Author : ಆರತಿ ಘಟಿಕಾರ್

Pages 112

₹ 90.00




Year of Publication: 2020
Published by: ತೇಜು ಪಬ್ಲಿಕೇಷನ್ಸ್
Address: #1014, 24ನೇ ಮುಖ್ಯರಸ್ತೆ, 16ನೇ ತಿರುವು, ಬಿಎಸ್.ಕೆ 2ನೇ ಹಂತ, ಬೆಂಗಳೂರು- 560070
Phone: 9900195626

Synopsys

‘ವಠಾರ ಮೀಮಾಂಸೆ’ ಲೇಖಕಿ ಆರತಿ ಘಟಿಕಾರ್ ಅವರ ಲಲಿತ ಪ್ರಬಂಧಗಳ ಸಂಕಲನ. ಸಾಹಿತ್ಯ ತಟ್ಟೆಯಲ್ಲಿನ ವಿಷಯದ ಕರ್ಪೂರಕ್ಕೆ ವಿಡಂಬನೆಯ ಕಿಡಿ ತಾಗಿಸಿದರ ಹಾಸ್ಯದ ಆರತಿ. ಇಂತಹ ಸಂದರ್ಭಗಳು ಪದೇ ಪದೇ ಘಟಿಸಬೇಕಾದರೆ ಆರತಿ ಘಟಿಕಾರರ ಲೇಖನಗಳನ್ನು ಓದಬೇಕು. ಹಾಸ್ಯದ ಶರ್ಕರಪಾಕದಲ್ಲಿ ಅದ್ದಿದ ವಿಷಯ-ರಸಗುಲ್ಲಗಳ ಸವಿಯನ್ನು ಬಲ್ಲವನೇ ಬಲ್ಲ. ನಗೆಮೊಗದ ಹೆಣ್ಣಿನಲ್ಲಿ ಲಾಲಿತ್ಯಕ್ಕೆ ಕೊರತೆಯೇ. ಮನದ ಲಾಲಿತ್ಯ ಅಂಗುಲಿಯಂತ್ಯಕ್ಕೆ ತಲುಪಿ ಲಲಿತ ಪ್ರಬಂಧ ಮೂಡುವುದು ಇಂತಹ ಬರಹಗಾರ್ತಿಗೆ ಸುಲಭವಾದ ಮತ್ತು ಇಷ್ಟವಾದ ಕಾರ್ಯ ಎನ್ನುತ್ತಾರೆ ಎನ್. ರಾಮನಾಥ್. ಮಗನ ಗಡ್ಡದಿಂದ ಹಿಡಿದು ದುಬೈನ ಬೋರ್ಡುಗಳವರೆಗೆ, ವಠಾರದ ಸಂದಿಗಳಿಂದ ಹಿಡಿದು ಬಹುಮಹಡಿ ಕಟ್ಟಡಗಳಲ್ಲಿನ ವಾಸದ ಸುಸಂಧಿಯವರೆಗೆ ಆರತಿಯ ಬರಹದ ವಿಸ್ತಾರ ಬೆರಗು ಮೂಡಿಸುವಂತಹದು ಎಂಬುದು ಪ್ರಕಾಶನ ರಾಮನಾಥ್ ಅವರ ಅಭಿಪ್ರಾಯ. ವಠಾರ ಮೀಮಾಂಸೆ ಹಳೆಯ ಉದ್ದನೆಯ ವಠಾರ, ಇಂದಿನ ಎತ್ತರದ ವಠಾರ(ಅಪಾರ್ಟ್ ಮೆಂಟ್) ಗಳೆರಡರ ಹಾಸ್ಯಮಯ ಉಲ್ಲಾಸಕರ ಲಲಿತ ಪ್ರಬಂಧ ಸಂಕಲನ.

ಕನ್ನಡ ಸಾಹಿತ್ಯ ಪರಿಷತ್ತಿನ 2020ನೆ ಸಾಲಿನ ಪ್ರೊ ದೇವಪ್ರಕಾಶ್ ಹಾಸ್ಯ ಸಾಹಿತ್ಯ ದತ್ತಿ ನಿಧಿ ಪ್ರಶಸ್ತಿಗೆ ಈ ಕೃತಿ ಭಾಜನವಾಗಿದೆ. 

About the Author

ಆರತಿ ಘಟಿಕಾರ್

ಲೇಖಕಿ ಆರತಿ ಘಟಿಕಾರ್ ಮೂಲತಃ ಬೆಳಗಾವಿ ಜಿಲ್ಲೆಯವರು. ಸಾಹಿತ್ಯಾಸಕ್ತರಾದ ಆರತಿ ಅವರು ಹಾಸ್ಯ ಲೇಖನ, ಲಲಿತ ಪ್ರಬಂಧ, ಹನಿಗವನ, ಕವನಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರ ಹಲವು ಲೇಖನ, ಹಾಸ್ಯ ಬರಹಗಳು ಕನ್ನಡದ ಪ್ರಮುಖ ದಿನ ಪತ್ರಿಕೆ, ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. "ಹನಿ ಹನಿ ಚಿತ್ತಾರ "ಹಾಗು ಭಾವದ ಹಕ್ಕಿ ಎಂಬ ಹನಿಗವನ ಸಂಕಲನಗಳು ಹಾಗೂ “ಮಾತ್ರೆ ದೇವೋ ಭವ “ ಮತ್ತು " ವಠಾರ ಮೀಮಾಂಸೆ " ಎಂಬ ಹಾಸ್ಯ ಲೇಖನ ಸಂಕಲನ ಹಾಗೂ ಲಲಿತ ಪ್ರಬಂಧ ಸಂಕಲನಗಳು ಬಿಡುಗಡೆಯಾಗಿವೆ . " ಮಾತ್ರೆ ದೇವೋ ...

READ MORE

Related Books