ನಾನೇಕೆ ಒಬ್ಬ ಹಿಂದೂ

Author : ವೇದಾ ಆಠವಳೆ

Pages 297

₹ 450.00

Buy Now


Year of Publication: 2018
Published by: Pothi.com
Address: No. 18 , Aditya layout, BSK 6th stage, Kanakapura Road, PO Talaghattapura, Bangalore -560062
Phone: 9482011847

Synopsys

ಹಿಂದೂ ಅನ್ನೋದು ಒಂದು ಮಾನಸಿಕ ಸ್ಥಿತಿ- ಜೀವನ ಪದ್ಧತಿ- ಆತ್ಮಪ್ರಜ್ಞೆ- ಸ್ವಾತಂತ್ರ್ಯ- ಆತ್ಮವಿಶ್ವಾಸ ... ಇನ್ನೂ ಏನೇನೋ... ಯಾಕೆಂದರೆ ಹಿಂದೂ ಧರ್ಮದಲ್ಲಿ ಯಾವುದೇ ನಿಯಮಗಳ ಹಂಗಿಲ್ಲ. ಅದು ಅನುಯಾಯಿಗಳ ಚಿಂತನೆಗಳನ್ನು ಕಟ್ಟಿಹಾಕಿಲ್ಲ ಬದಲಾಗಿ ಸ್ವಯಂ ಉತ್ತರಗಳನ್ನು ಹುಡುಕಲು ನಿರಂತರವಾಗಿ ಪ್ರೇರೇಪಿಸಿದೆ. ಒಂದುವೇಳೆ ಅವರು ಧರ್ಮದ ಆಚರಣೆಗಳನ್ನು ವಿರೋಧಿಸಿದರೂ ಯಾರೂ ಅವರನ್ನು ಧರ್ಮದಿಂದ ಕಿತ್ತು ಹಾಕಲಾರರು. ತಮ್ಮ ಧರ್ಮದ ಬಗ್ಗೆ ನಿರ್ಭೀತಿಯಿಂದ ಯೋಚಿಸುತ್ತಾ, ತಪ್ಪು ಅನಿಸಿದ್ದನ್ನು ಪ್ರಶ್ನಿಸುತ್ತಾ ಬದುಕಬಹುದು. ಹಾಗೆ ನೋಡಿದರೆ ಹಿಂದೂ ಧರ್ಮ ಮತ್ತು ಅದರ ಆಚರಣೆಗಳು ಯಾವೊಬ್ಬ ವ್ಯಕ್ತಿಯಿಂದ ಆರಂಭವಾಗಿಲ್ಲ. ಇತರ ಧರ್ಮಗಳಂತೆ ಹಿಂದೂಗಳು ದೇವಾಲಯಗಳ ನಿಯಂತ್ರಣದಲ್ಲಿ ಬಾಳುತ್ತಿಲ್ಲ. ಇಲ್ಲಿ ಯಾರೂ ಶ್ರೇಷ್ಠರಲ್ಲ... ಕನಿಷ್ಠರೂ ಅಲ್ಲ .. ಹಿಂದೂಗಳು ಧರ್ಮದ ಹುಳುಕುಗಳ ಬಗ್ಗೆ ಕುರುಡಾಗಿದ್ದು, ಸದ್ವಿಚಾರಗಳನ್ನು ಮಾತ್ರ ಬಡಬಡಿಸುವ ಬದಲು, ನಾನೇಕೆ ಒಬ್ಬ ಹಿಂದೂ ? ಎಂದು ಪ್ರಶ್ನಿಸುವ- ಉತ್ತರ ಹುಡುಕುವ ಪ್ರಜ್ಞೆ ಬೆಳೆಸಿಕೊಂಡಿದ್ದಾರೆ. 

ಈ ಕೃತಿಯು 47 ಪರಿವಿಡಿಗಳನ್ನು ಹೊಂದಿದ್ದು, ನಾನೊಬ್ಬ ಹಿಂದೂ , ದೇವರು ಇದ್ದಾನೆಯೇ?, ಪುರಾನಗಳೆಷ್ಟು ಸತ್ಯ, ಪ್ರಾಚೀನ ಹಿಂದೂ ದೇವಾಲಯ : ಅದ್ಭುತ-ಅಚ್ಚರಿ, ಪಾಪಿಗಳ ಲೋಕದಲ್ಲಿ, ಬಹುರೂಪಿ ದೇವರು, ಆಚರಣಗಳನ್ನೇಕ ಪ್ರಶ್ನಿಸಬೇಕು?, ಮೂವತ್ತೂರು ಕೋಟಿ ದೇವರುಗಳು!, ಯೋಗ ಹಿಂದೂಧರ್ಮದ ಭಾಗ, ಜಾತ್ಯಾರ್ತೀಕವಲ್ಲ, ಹಿಂದೂ ದೇವತೆಗಳು ಭೋಜನಪ್ರಿಯರೇ?, ವಿಗ್ರಹಾರಾಧನೆ ಮೌಢ್ಯವೇ?, ಅನೈತಿಕತೆ ಮತ್ತು ಹಿಂದೂಧರ್ಮ, ಚಿರಂಜೀವಿ ಹಿಂದೂಧರ್ಮ , ಧರ್ಮ, ಮತ ಮತ್ತು ನನ್ನ ಮುಸ್ಲಿಮ್ ಮಿತ್ರ, ಈ ಜಗತ್ತಿಗೆ ಸೃಷ್ಟಿಕ ನಿರುವನೇ? , ನೀವು ಅಂಧವಿಶಾನಿಯೇ?, ಹಿಂದೂ - ವಿದೇಶಿ ಶಬ್ದವೇ?, ಅಪಾಯದಂಚಿನಲ್ಲಿ ಹಿಂದೂಧರ್ಮ!, ನನಗೆ ದೇವರ ಭಯವಿಲ್ಲ, ಯಾಕೆ ಗೊತ್ತಿ?, ನಿಮ್ಮ ಜಾತಿ ಯಾವುದು ಸ್ವಾಮಿ, ಕೊಂಕಣಿ ಜೋಗುಳದಲ್ಲಿ ಗೋವಾದ ಕರಾಳ ಚರಿತ್ರೆ, ಸತಿ ಪದ್ಧತಿಯ ಕಡೆಗೊಂದು ಇಣುಕು ನೋಟ, ನೈತಿಕ ಲೈಂಗಿಕತೆಯಂತೆ ಬರೀ ಬೂಟಾಟಿಕೆ, ಆತ್ಮ - ಆತ್ಮಸಂಗಾತಿ ಇತ್ಯಾದಿ ತಮಾಷೆಗಳು, ದೇವಾಲಯಗಳು ಸನಾತನ ಧರ್ಮ ವಿರೋಧಿಗಳೇ, ಅಧ್ಯದೊಳಗೊಂದು ಸುತ್ತು, ಹಿಂದೂಧರ್ಮ ಪ್ರೇಮವಿವಾಹಕ್ಕೆ ವಿರೋಧಿಯೇ?, ಸರ್ಪಾರಾಧನೆ ಮತ್ತು ಮೂಢನಂಬಿಕೆಗಳು, ಹಿಂದೂಗಳ ಅರ್ಥ ಶಾಸ್ತ್ರಿ ಹಿಂದೂಗಳು ಹೆಣ್ಣನ್ನು ಗೌರವಿಸುವುದಿಲ್ಲ, ಗ್ಲೋಬಲ್ ವಾರ್ಮಿಂಗ್, ಗುರು ಠವೋ – ದುಡ್ಡು ದೋಚುವ ದಂಧಯೋ , ರಾಜಕೀಯ ಪಗಡೆಯಾಟದಲ್ಲಿ ಹಿಂದುತ್ತವೇ ದಾಳ, ಮನುಷ್ಯ ದೇವರಿಗಿಂತಲೂ ಬಲಶಾಲಿಯೇ?, ದೇವನೊಬ್ಬ, ನಾಮ ಹಲವು ಮದುವೆಗೆ ಬೇಕೆ ಜಾತಕದ ಅಪ್ಪಣೆ?, ಶ್ಲೋಕಗಳ ಬಳಕೆಯಲ್ಲಿ ಎಚ್ಚರವಿರಲಿ, ಬಾಲ್ಯವಿವಾಹ ಮತ್ತು ಹಿಂದೂ ಧರ್ಮ, ಹಿಂದೂಧರ್ಮದಲ್ಲಿ ಗೋತ್ರ ವ್ಯವಸ್ಥೆ, ಈ ಪರಿಸ್ಥಿತಿಗೆಲ್ಲ ಬರೇ ಕಾರಣ, ಬ್ರಹ್ಮಂ ಎಂದರೇನು?, ಅದು ವೈಜ್ಞಾನಿಕವೇ?, ಹಿಂದೂ ಧರ್ಮ ಮತ್ತು ಸನಾತನ ಧರ್ಮ, ಹಿಂದೂಧರ್ಮದಲ್ಲಿ ಮಾನವತಾವಾದ ಶೀರ್ಷಿಕೆಗಳು ಇಲ್ಲಿವೆ. 

ಸನಾತನ ಧರ್ಮದ ತಳಕಟ್ಟಿನ ಮೇಲೆ ನಿಂತ ಹಿಂದೂಧರ್ಮದ ಅಂತರಾಳವನ್ನು ಆಧುನಿಕತೆಯ ಒರೆಗಲ್ಲಿಗೆ ಹಚ್ಚುವ, ಪತ್ರಕರ್ತ ಉದಯ್ ಲಾಲ್ ಪೈ ಅವರ “Why Am I a Hindu” ಎಂಬ ಇಂಗ್ಲೀಷ್ ಕೃತಿಯನ್ನು ವೇದಾ ಆಠವಳೆ ಕನ್ನಡಕ್ಕೆ ಅನುವಾದಿಸಿದ್ದಾರೆ. 47 ಬಿಡಿ ಅಧ್ಯಾಯಗಳ ಈ ಪುಸ್ತಕ “ನಾನೇಕೆ ಒಬ್ಬ ಹಿಂದೂ?” ಅನ್ನೋ ಹೆಸರಲ್ಲಿ ಈಗ ಪ್ರಕಟವಾಗಿದೆ. ಬಹುರೂಪಿ ದೇವರು- ದೇವಾಲಯಗಳು- ಅರ್ಥಪೂರ್ಣ ಸಂಪ್ರದಾಯಗಳು– ಗೋತ್ರ- ಜಾತಕ – ಮದುವೆ- ನೈವೇದ್ಯ – ಪ್ರಸಾದ – ಆತ್ಮ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವೈಚಾರಿಕ ವಿವರಣೆ ಇಲ್ಲಿ ನಿಮಗೆ ಸಿಗುತ್ತದೆ. ಪೈ ಮತ್ತು ಅವರ ಓದುಗರ-ಮಿತ್ರರ ನಡುವಣ ಸಂಭಾಷಣೆಯ ರೂಪದಲ್ಲಿರುವ ಬರಹಗಳು  ಕನ್ನಡೀಕರಣಗೊಂಡಿವೆ.

ದೇವರು ಇದ್ದಾನೆಯೇ? , ಪುರಾಣಗಳು ನಿಜವೇ?, ಹಿಂದೂ ಆಚರಣೆಗಳು ಪ್ರಶ್ನಾತೀತವೇ ?, ಹಣೆಬೊಟ್ಟು ಇಂದಿಗೆ ಪ್ರಸ್ತುತವೇ? , ಮನುಷ್ಯ ದೇವರಿಗಿಂತ ಬಲಶಾಲಿಯೇ? , ಮದುವೆಗೆ ಬೇಕೇ ಜಾತಕದ ಅಪ್ಪಣೆ? ಇತ್ಯಾದಿ ಬರಹಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಕಲ್ಲು ದೇವರಾಗಬಹುದು ಆದರೆ ದೇವರು ಕಲ್ಲಲ್ಲ , ಎಂದೆಂದಿಗೂ ಹಿಂದೂ , “ ಹಿಂದೂ” - ವಿದೇಶೀ ಶಬ್ದವೇ?, ನಿಮ್ಮ ಜಾತಿ ಯಾವುದು ಸ್ವಾಮೀ? , ಹಿಂದೂಧರ್ಮ ಪ್ರೇಮವಿವಾಹಕ್ಕೆ ವಿರೋಧಿಯೇ? , ಎಂಥ ಅದ್ಭುತ ನಮ್ಮ ದೇಗುಲ ! ಮುಂತಾದ ಲೇಖನಗಳು ಸನಾತನಧರ್ಮದ ತಾರ್ಕಿಕತೆಯ ಪರಿಚಯ ನೀಡುತ್ತದೆ.

 

About the Author

ವೇದಾ ಆಠವಳೆ
(22 July 1972)

ವೇದಾ ಆಠವಳೆ ಅವರ ಹುಟ್ಟೂರು ಉಡುಪಿ ಜೆಲ್ಲೆಯ ಮಾಳ ಗ್ರಾಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು ನಂತರ ಟೆಲಿಕಮ್ಯುನಿಕೇಷನ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದರು. ಕೆಲ ಕಾಲ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು.ನಂತರ ಸಂಸ್ಕೃತ ಭಾರತಿ ಸಂಸ್ಥೆಯಲ್ಲಿ ಅಲ್ಪಾವಧಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಮತ್ತು ಬಿ.ಎಡ್ ಪದವಿ ಪಡೆದರು. ಕಳೆದ ಹದಿನಾಲ್ಕು ವರ್ಷಗಳಿಂದ ಬೆಂಗಳೂರಿನ ಅನೇಕ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡಿರುವ ಅವರು ಪ್ರಸ್ತುತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಕನ್ನಡ ಓದು- ಬರವಣಿಗೆ ಇವರ ಹವ್ಯಾಸ. ತಮ್ಮ ...

READ MORE

Related Books