ವೇದ ವಿದ್ವಾಂಸ, ಕವಿ ವಿಷ್ಣು ಭಟ್‌ ಡೋಂಗ್ರೆ

Author : ಕೆ. ಶ್ರೀಕರ ಭಟ್ ಮರಾಠೆ

Pages 56

₹ 45.00




Year of Publication: 2018
Published by: ಕನ್ನಡ ಸಂಘ ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಪ್ರಕಟಿಸಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ 258 ಪುಸ್ತಕವಿದು. ಬೆಳ್ತಂಗಡಿ ಮೂಲದ ಡಿ.ವಿಷ್ಣು ಭಟ್ ಡೋಂಗ್ರೆ ಅವರು ವೇದಗಳನ್ನು ಆಧುನಿಕ ಕಾಲಕ್ಕೆ ಅರ್ಥವಾಗುವಂತೆ ವಿವರಿಸಬಲ್ಲ ಅಪರೂಪದ ವಿದ್ವಾಂಸರು. ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ವಿಶೇಷ ಪಾಂಡಿ ಇರುವ ಅವರು ಕೊಡಗಿನ ಚಯ್ಯಂಡಾಣೆಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ರಾಜ್ಯ ಮಟ್ಟದ ಶ್ರೇಷ್ಠಶಿಕ್ಷಕ ಪ್ರಶಸ್ತಿ ಪಡೆದಿರುವ ಅವರು ನಾಲ್ಕು ಖಂಡ ಕಾವ್ಯಗಳನ್ನು, ಒಂಬತ್ತು ಕಾದಂಬರಿಗಳು, ಎರಡು ನಾಟಕಗಳು ಮತ್ತು ಇಪ್ಪತ್ತೇಳು ಧಾರ್ಮಿಕ ಆಧ್ಯಾತ್ಮಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೊಡಗಿನ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹುಟ್ಟಿದ ತಾಲೂಕಾದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಅವರಿಗೆ ಪ್ರಾಪ್ತವಾಗಿದೆ. ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ಕೆ. ಶ್ರೀಕರ ಭಟ್ ಮರಾಠೆ

ಕೆ. ಶ್ರೀಕರ ಭಟ್ ಮರಾಠಯವರು ಕಾರ್ಕಳ ತಾಲೂಕಿನ ಇದು ಗ್ರಾಮದವರು. ಅವರು ನಲುವತ್ತು ವರ್ಷಗಳ ಕಾಲ ಪತ್ರಕರ್ತರಾಗಿ ದುಡಿದು, ಈಗ ಸ್ವಯಂನಿವೃತ್ತಿ ಪಡೆದು ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಕೃಷಿಕರಾಗಿದ್ದಾರೆ. ನವಭಾರತ, ಉದಯವಾಣಿ, ಪ್ರಜಾವಾಣಿ, ವಿಶಾಲ ಕರ್ನಾಟಕ ಮತ್ತು ಕನ್ನಡ ಪ್ರಭ' ದೈನಿಕಗಳಲ್ಲಿ; ಪ್ರಜಾಪ್ರಭುತ್ವ ಹಾಗೂ ಕರ್ಮವೀರ ವಾರಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಮತ್ತು ಸಹಸಂಪಾದಕರಾಗಿ ದುಡಿದ ಅನುಭವ ಅವರಿಗಿದೆ. ಮದ್ರಾಸಿನಲ್ಲಿದ್ದ ಸೋವಿಯತ್ ಒಕ್ಕೂಟದ ವಾರ್ತಾ ಇಲಾಖೆಯಲ್ಲಿ ಭಾಷಾಂತರಕಾರ ಸಂಪಾದಕರಾಗಿ ಕೆಲಸ ಮಾಡಿದ್ದರು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ವಿಶೇಷ ಪರಿಶ್ರಮವಿದೆ. ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯೋಗ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ...

READ MORE

Related Books