ವೀರಶೈವ ಸಾಹಿತ್ಯ ಸಮೀಕ್ಷೆ

Author : ಸದಾನಂದ ಕನವಳ್ಳಿ

Pages 698

₹ 300.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ವೀರಶೈವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಸಾಮಾಜಿಕವಾಗಿ ಜಟಿಲ ಸಂಗತಿಯಾದ ಜಾತಿ, ಸಾಂಸ್ಕೃತಿಕವಾಗಿ ತನ್ನ ಪ್ರಭಾವವನ್ನು ಬೀರುತ್ತಲೇ ಬಂದಿದೆ. ಈಗೆ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟ ವೀರಶೈವರ , ವೀರಶೈವ ಸಾಹಿತ್ಯದ ಆರಂಭದ ಕಾಲದಿಂದ 20ನೇ ಶತಮಾನದವರೆಗಿನ ವೀರಶೈವ ಸಾಹಿತ್ಯ ಕೊಡುಗೆಗಳನ್ನು ದಾಖಲಿಸುವ ಮತ್ತು ವಿಮರ್ಶಿಸುವ ಕೆಲಸವನ್ನು ಉಭಯ ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲದೆ ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲೂ ವೀರಶೈವರು ಕೊಡುಗೆಗಳನ್ನು ನೀಡಿದ್ದಾರೆ. ಈಗೆ ಹಲವು ಸಾಹಿತ್ಯಗಳಿಗೆ ಕೊಡುಗೆಯನ್ನು ಕೊಟ್ಟ ವೀರಶೈವರ ಬಗ್ಗೆ ಲೇಖಕರುಗಳಾದ ಪ್ರೊ. ಸದಾನಂದ ಕನವಳ್ಳಿ & ಪ್ರೊ. ಸಿ.ವಿ.ಕೆರಿಮನಿ ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.

About the Author

ಸದಾನಂದ ಕನವಳ್ಳಿ
(18 September 1935 - 03 April 2015)

ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...

READ MORE

Related Books