ವೇಮನ

Author : ಜಿ. ಜ್ಞಾನಾನಂದ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ವೇಮನ' ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ಜಿ. ಜ್ಞಾನಾನಂದ  ರಚಿಸಿದ್ದಾರೆ.  ತೆಲುಗು ಭಾಷೆಯ ಖ್ಯಾತ ಕವಿ. ಚಿನ್ನಗಳಿಸುವ, ಸುಖವಾಗಿ ಬದುಕುವ ಆಸೆ ಇದ್ದವನು ಸಂನ್ಯಾಸಿಯಾದ, ಯೋಗಿಯಾದ. ಸಣ್ಣಸಣ್ಣ ಪದ್ಯಗಳಲ್ಲಿ, ಜನಸಾಮಾನ್ಯರ ಭಾಷೆಯಲ್ಲಿ ಜೀವನಕ್ಕೆ ಮಾರ್ಗದರ್ಶನ ಮಾಡುವ ಸತ್ಯಗಳನ್ನು ವೇಮನ ನಿರೂಪಿಸಿದ, ಜನರ ಕವಿಯಾದ ಎಂದು ವೇಮನ ಅವರ ಕುರಿತಾಗಿ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ವೇಮನ ಅವರು ಸನ್ಯಾಸದೆಡೆಗೆ ಹಿಡಿದ ಮಾರ್ಗ, ಹಾಡುಗಳಿಂದ ಜನರ ಪ್ರೀತಿ ಗಳಿಸಿದ ಪರಿ, ಬಾಲ್ಯ ಜೀವನ, ಸಂಗೀತ ಕ್ಷೇತ್ರದ ಸಾಧನೆಗಳು ಹೀಗೆ ವೇಮನ ಅವರ ಜೀವನದ ಹಲವು ಆಯಾಮಗಳನ್ನು ಲೇಖಕರು ಇಲ್ಲಿ ನವಿರಾಗಿ ಚಿತ್ರಿಸಿದ್ದಾರೆ.

About the Author

ಜಿ. ಜ್ಞಾನಾನಂದ
(05 July 1940)

ಲೇಖಕ ಜ್ಞಾನಾನಂದರು ಮೂಲತಃ ಚಿಕ್ಕಬಳ್ಳಾಪುರದ ನಂದಿ ಗ್ರಾಮದವರು. ತಂದೆ- ಎಂ.ಆರ್. ಜಿ. ಶಂಕರ್, ತಾಯಿ ಈಶ್ವರಮ್ಮ. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪಡೆದ ಜ್ಞಾನಾನಂದರು ಆನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ, ಪಿ.ಎಚ್‌.ಡಿ. ಪಡೆದರು. ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್‌, ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್‌ (ಸ್ಟ್ಯಾಟಿಸ್ಟಿಕಲ್‌ ಅಪ್ಲೈಡ್‌ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್‌ ಡಿಪ್ಲೊಮ ಮತ್ತು ಡಿಪ್ಲೊಮ ...

READ MORE

Related Books