ವೆಂಡರ್ ಕಣ್ಣು

Author : ಶಿವು ಕೆ.

Pages 136

₹ 120.00




Year of Publication: 2010
Published by: ಶಿವು.ಕೆ ಪ್ರಕಾಶನ
Address: 118, 7ನೇ ಮುಖ್ಯರಸ್ತೆ,5ನೇ ಅಡ್ಡರಸ್ತೆ, ಲಕ್ಷ್ಮಿನಾರಾಯಣಪುರ, ಬೆಂಗಳೂರು
Phone: 9845147695

Synopsys

ಚಳಿ, ಗಾಳಿ, ಮಳೆ ಎನ್ನದೆ ತಣ್ಣನೆ ಮುಂಜಾವಿನಲ್ಲಿ ಬೆಚ್ಚನೆಯ ಬೆಳಗು ತರುವ ಅಸಂಖ್ಯಾತ, ಅನಾಮಿಕ ದಿನಪತ್ರಿಕೆ ಹಂಚುವ ಹುಡುಗರ ಮತ್ತು ದಿನಪತ್ರಿಕೆ ವೆಂಡರುಗಳ ನೈಜ ಬದುಕಿನ ಅನುಭವದ ಚಿತ್ರಣ ಈ ಕೃತಿಯಲ್ಲಿದೆ. ಮುಂಜಾವಿನ ನಾಲ್ಕು ಗಂಟೆ ಸಮಯದಲ್ಲಿ ಆರಂಭವಾಗುವ ಇವರ ಕಾಯಕ ಮುಗಿಯುವುದು ಬೆಳಿಗ್ಗೆ ಒಂಬತ್ತರ ಹೊತ್ತಿಗೆ. ಪತ್ರಿಕೆ ಬಂಡಲ್‌ ಗಳನ್ನು ಇಳಿಸಿಕೊಂಡು, ಯಾವ್ಯಾವ ಮನೆಗೆ ಯಾವ ಪತ್ರಿಕೆ ಕೊಡಬೇಕು ಎಂಬುದನ್ನು ಜ್ಞಾಪನದಲ್ಲಿಟ್ಟುಕೊಂಡು ಅವರ ಮನೆಯ ಬಾಗಿಲಿಗೆ ಪತ್ರಿಕೆ ತಲುಪಿಸುವ ಈ ಕಾಯಕದಾತರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ನೀವು ಈ ಕೃತಿಯನ್ನು ಓದಲೇಬೇಕು.

About the Author

ಶಿವು ಕೆ.
(24 December 1975)

ಛಾಯಾಗ್ರಾಹಕ ಹಾಗೂ ಹವ್ಯಾಸಿ ಬರಹಗಾರರಾಗಿರುವ ಶಿವು ಅವರು ಜನಿಸಿದ್ದು 1975 ಡಿಸೆಂಬರ್ 24 ರಂದು. ಫೋಟೊಗ್ರಫಿನುರಿತರಾಗಿರುವ ಇವರು ಕ್ಲಿಕ್ಕಿಸಿದ ಛಾಯಾಚಿತ್ರಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಇವರು ಬರೆದ ಕೃತಿಗಳೆಂದರೆ ವೆಂಡರ್ ಕಣ್ಣು, ಗುಬ್ಬಿ ಎಂಜಲು, ಫೋಟೋ ಕ್ಲಿಕ್ಕಿಸುವ ಮುಂತಾದವು. ವೆಂಡರ್‌ ಕಣ್ಣು ಪುಸ್ತಕಕ್ಕೆ ದ.ರಾ.ಬೇಂದ್ರೆ ಪ್ರಶಸ್ತಿ ಮತ್ತು ಪಂಡಿತ ಪುಟ್ಟರಾಜ ಗವಾಯಿ ಪ್ರಶಸ್ತಿ ಲಬಿಸಿದೆ. ಇವರು ಬರೆದಿರುವ ಆಯಸ್ಸು ಕರಗುವ ಸಮಯದಲ್ಲಿ ಸಣ್ಣ ಕತೆಗೆ ಮಂಗಳೂರಿನ ಸನ್ಮಾರ್ಗ ಪತ್ರಿಕೆ ನಡೆಸಿದ ಸಣ್ಣ ಕತೆ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ.  ...

READ MORE

Related Books