ವೆಂಕಾಮಾತ್ಯ

Author : ಲ.ನ. ಸ್ವಾಮಿ

₹ 500.00




Year of Publication: 2022
Published by: ರೇಣುಕಾ ಪ್ರಕಾಶನ
Address: ನೆಲ ಮಹಡಿ, ಬೇಲೂರು ರಸ್ತೆ, ಮಾಚೇನಹಳ್ಳಿ ಗ್ರಾಮ ಪಂಚಾಯತಿ\nಗುಡ್ಡೇನಹಳ್ಳಿ ಕೊಪ್ಪಲು, ಹಾಸನ 573 201
Phone: 9483987782

Synopsys

ಇತಿಹಾಸ ಸಂಶೋಧಕ, ಪ್ರಾಧ್ಯಾಪಕ, ಲೇಖಕ ಲ.ನ. ಸ್ವಾಮಿ ಅವರ ಕೃತಿ ʻಮೈಸೂರು ಸಂಸ್ಥಾನದ ರಾಜಕಾರ್ಯಧುರಂಧರ ವೆಂಕಾಮಾತ್ಯʼ. ಇತಿಹಾಸ ಹಾಗೂ ಸಾಹಿತ್ಯ ವಲಯದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ವೆಂಕಪ್ಪಯ್ಯನವರ ಕುರಿತಾದ ಸಮಗ್ರ ಚಿತ್ರಣವನ್ನು ಪುಸ್ತಕ ನೀಡುತ್ತದೆ. ವೆಂಕಪ್ಪಯ್ಯನವರ ವೈಯಕ್ತಿಕ ಬದುಕು, ರಾಜತಾಂತ್ರಿಕ ನೈಪುಣ್ಯ, ಕನ್ನಡ ಸಂಸ್ಕೃತಗಳಲ್ಲಿನ ಅವರ ಸಾಹಿತ್ಯ ಸಾಧನೆ, ಅವರ ವಂಶದ ಹಿನ್ನೆಲೆ, ವಿವಿಧೆಡೆ ಇರುವ ಅವರ ಚಿತ್ರ-ಶಿಲ್ಪಗಳ ಗುರುತಿಸುವಿಕೆ, ಅವರ ಸ್ವಂತ ಊರಾದ ಅಕ್ಕಿರಾಮಪುರದ ವಿವರಗಳು, ಆ ಊರಿನ ಸ್ಥಳ ಪುರಾಣದ ಸಂಸ್ಕೃತ ಮೂಲ ಹಾಗೂ ಕನ್ನಡ ಭಾವನುವಾದಗಳು ಮುಂತಾದ ಮಾಹಿತಿಗಳನ್ನು ಅಧ್ಯಯನದ ಮೂಲಕ ಸ್ವಾಮಿ ಅವರು ಕಟ್ಟಿಕೊಟ್ಟಿದ್ದಾರೆ.

About the Author

ಲ.ನ. ಸ್ವಾಮಿ

ಲ.ನ. ಸ್ವಾಮಿ ಅವರು 1962ರಂದು ಮಂಡ್ಯದಲ್ಲಿ ಜಿಲ್ಲೆಯಲ್ಲಿ ಜನಿಸಿದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಎಎಸ್‌ಐ, ಸೆಂಟರ್‌ ಫಾರ್‌ ಹಿಸ್ಟರಿ ಆಂಡ್‌ ಫಿಲಾಸಫಿ ಆಫ್‌ ಸಯನ್ಸ್‌, ತಮಿಳ್‌ ಯೂನಿವರ್ಸಿಟಿ, ಮುಂತಾದ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಮೈಸೂರಿನ ಥೆರೆಶಿಯನ್‌ ಕಾಲೇಜು, ಜೆಎಸ್‌ಎಸ್‌ ಕಾಲೇಜು ಮತ್ತು ನಟರಾಜ ಕಾಲೇಜುಗಳಲ್ಲಿ ಇತಿಹಾಸ ಪ್ರಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರದು. ಬರವಣಿಗೆ ಇವರ ಹವ್ಯಾಸ. ಕನ್ನಡ- ಆಂಗ್ಲ ಭಾಷೆಯಲ್ಲಿ 25ಕ್ಕೂ ಹೆಚ್ಚು ಸಂಶೋಧನ ಗ್ರಂಥಗಳನ್ನು ಪ್ರಕಟಿಸಿದ್ದಾರೆ, ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ರಚಿಸಿ ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಪ್ರಕಟಿತ ಕೃತಿಗಳು: ವೆಂಕಾಮಾತ್ಯ, ...

READ MORE

Related Books