ವರ್ಜಿನ್ ಮೊಹಿತೊ

Author : ಸತೀಶ್ ಚಪ್ಪರಿಕೆ

Pages 120

₹ 120.00
Year of Publication: 2020
Published by: ಅಂಕಿತ ಪ್ರಕಾಶನ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬೆಂಗಳೂರು-560 004
Phone: 8123156400

Synopsys

ಆಷಾಢದ ಆಗಸದಲ್ಲಿ ತೇಲಿ ಬರುವ ದಟ್ಟ ಮೋಡಗಳಂತೆ ಸುಯ್ಯನೆ ಬೀಸುವ ಇಲ್ಲಿಯ ಕತೆಗಳು ಓದುಗನಲ್ಲಿ ಭಾವಗಳ ಭೋರ್ಗರೆತವನ್ನು ಹೊಮ್ಮಿಸುತ್ತವೆ. ಆಧುನಿಕತೆಗೆ ಒಗ್ಗಿಕೊಂಡ ಮನ ಬಿಡುಗಡೆಗೆ ಹಂಬಲಿಸುತ್ತಾ ಕಾಲದೊಂದಿಗೆ ಚಲಿಸುವ ಪಾತ್ರಗಳು, ನೇರವಾಗಿ ಬಿತ್ತನೆಯಾಗುವ ಕತೆಗಳು ಸಲೀಸಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿವೆ. 

ಕೃತಿಯ ಬೆನ್ನುಡಿಯಲ್ಲಿ ‘ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಎರಡನೆಯ ಕತಾ ಸಂಕಲನ ’ವರ್ಜಿನ್‌ ಮೊಹಿತೊ’. ಈ ಸಂಕಲನದಲ್ಲಿಯ ಎಂಟೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವ ರೀತಿ, ತಂತ್ರ, ಭಾಷೆ, ನೇಯ್ಗೆಗಳಲ್ಲಿಯೂ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದು ವಿಶೇಷ. ಒಂದರ ಹೆಜ್ಜೆ ಜಾಡಿನಲ್ಲಿ ಮತ್ತೊಂದು ಸಾಗದೇ ಇರುವ ಹಾಗೆ ಕತೆ ಕಟ್ಟುವ ರೀತಿ ಗಮನ ಸೆಳೆಯುತ್ತದೆ. ’ವರದಿ’ಯಾಗದೇ ’ಕತೆ’ಯಾಗಿಸುವ ಕಸುಬುಗಾರಿಕೆ ಕಾಣಿಸುತ್ತದೆ. ಅತೀ ಎನ್ನಿಸದ ಭಾವನಾತ್ಮಕ ಅಂಶ ಈ ಕತೆಗಳ ಕೇಂದ್ರದಲ್ಲಿವೆ. ನವ್ಯೋತ್ತರ ಕಾಲಘಟ್ಟದ ಕನ್ನಡದ ಕತೆಗಳ ಮುಂದುವರಿಕೆಯಂತಿರುವ ಈ ಸಂಕಲನದ ಕತೆಗಳು ’ವರ್ತಮಾನ’ಕ್ಕೆ ಮಿಡಿಯುತ್ತವೆ. ಅಷ್ಟು ಮಾತ್ರವಲ್ಲದೇ, ಸಮಕಾಲೀನ ಸಂಕೀರ್ಣ ಬದುಕಿನ ಸಂಘರ್ಷವನ್ನು ತಣ್ಣನೆಯ ಧಾಟಿಯಲ್ಲಿ ಕಟ್ಟಿಕೊಡುತ್ತವೆ. ಇಲ್ಲಿಯ ಕತೆಗಳಲ್ಲಿಯ ವ್ಯಕ್ತಿಗಳು-ವ್ಯಕ್ತಿತ್ವಗಳು ’ಮಾನವೀಯ’ ನೆಲೆಯಲ್ಲಿ ಮಿಡಿಯುವುದು ’ತಂತ್ರ’ ಅಲ್ಲ. ಬದಲಿಗೆ, ಲೇಖಕರ ಬದುಕಿನ ಬಗೆಗಿನ ’ಕಾಳಜಿ’ಯು ಪಾತ್ರಗಳ ರೂಪದಲ್ಲಿ ಕತೆಗಳಾಗಿವೆ” ಎಂದಿದ್ದಾರೆ ದೇವು ಪತ್ತಾರ.

 

About the Author

ಸತೀಶ್ ಚಪ್ಪರಿಕೆ

ಸತೀಶ್ ಚಪ್ಪರಿಕೆ- ಕುಂದಾಪುರ ತಾಲೂಕಿನ ಪುಟ್ಟ ಊರಾದ ಚಪ್ಪರಿಕೆಯಲ್ಲಿ ಜನಿಸಿದ ಸತೀಶ್ ಚಪ್ಪರಿಕೆಯವರು ಪತ್ರಿಕೋದ್ಯಮ, ಸಾಹಿತ್ಯ ಎರಡೂ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಪ್ರಜಾವಾಣಿಯ ಮುಸಾಫಿರ್ ಅಂಕಣದ ಮೂಲಕ ಹಲವು ಮಹನೀಯರ ಬದುಕನ್ನು ಗುರುತಿಸಿದ ಸತೀಶ್ ಚಪ್ಪರಿಕೆಯವರು, ಕನ್ನಡದ ಪ್ರಸಿದ್ಧ ಸುದ್ದಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.  ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ 'ಬ್ರಿಟಿಷ್ ಶಿಪ್ಪಿಂಗ್ ಸ್ಕಾಲರ್‌ಷಿಪ್' ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೊಟೇಲ್ ಉದ್ಯಮದ ಹಿನ್ನಲೆಯಲ್ಲಿ ಕ್ರಮೇಣ ಬೆಂಗಳೂರಿಗೆ ಬಂದು ...

READ MORE

Related Books