ವಿಭಿನ್ನ ದೃಷ್ಟಿಯಲ್ಲಿ ಜೀವನ ದರ್ಶನ

Author : ಸ್ವಾಮಿ ಸುಖಬೋಧಾನಂದ

Pages 176

₹ 180.00




Year of Publication: 2015
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ಬರೆದ ಕೃತಿ -ವಿಭಿನ್ನ ದೃಷ್ಟಿಯಲ್ಲಿ ಜೀವನ ದರ್ಶನ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಕೃತಿ ಸಹಕಾರಿ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಒತ್ತಡದ ಇಂದಿನ ಸನ್ನಿವೇಶದಲ್ಲಿ ಮಾನಸಿಕ ನೆಮ್ಮದಿ ಇಲ್ಲದೇ ತೊಳಲಾಡುವ ಮಂದಿ ಬಹಳ. ಇವರ ಮಾನಸಿಕ ನೆಮ್ಮದಿಗೆ ಜೀವನ ದರ್ಶನದ ಅರಿವು ಮುಖ್ಯ. ಈ ಜೀವನ ದರ್ಶನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ ಒತ್ತಡ ಕಡಿಮೆ ಮಾಡಿಕೊಳ್ಳಲು ಅವರು ಅವರದೇ ಆದ ತಂತ್ರಗಳನ್ನು ಉಪಯೋಗಿಸಬೇಕು. ಇಂತಹ ಪ್ರಯೋಗಗಳು ಜೀವನದರ್ಶನದಲ್ಲಿವೆ ಎಂಬ ಅರಿವನ್ನು ಮೂಡಿಸುವ ಕೃತಿ ಇದು.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books