ವಿಚಾರ ದೀಪ್ತಿ

Author : ಶರೀಫ ಗಂಗಪ್ಪ ಚಿಗಳ್ಳಿ

Pages 152

₹ 140.00




Year of Publication: 2021
Published by: ದಾಕ್ಷಾಯಿಣಿ ಪ್ರಕಾಶನ
Address: # 418/1, ವೀಣೆಶಾಮಣ್ಣ ರಸ್ತೆ ಅಗ್ರಹಾರ ಮೈಸೂರು- 570004
Phone: 9902065126

Synopsys

ಲೇಖಕ ಶರೀಫ ಗಂ ಚಿಗಳ್ಳಿ ಅವರ ಚೊಚ್ಚಲ ಕೃತಿ ‘ವಿಚಾರ ದೀಪ್ತಿ’. ವಿಚಾರ ದೀಪ್ತಿ ಹೊತ್ತಿಗೆಯಲ್ಲಿ ಒಟ್ಟು 54 ಲೇಖನಗಳಿದ್ದು ಅವು ಒಂದಕ್ಕಿಂತ ಒಂದು ವಿಭಿನ್ನ ವಿಚಾರ ವೈವಿಧ್ಯತೆಯನ್ನು ಹೊಂದಿವೆ. ಡಾ. ಲಿಂಗರಾಜ ರಾಮಾಪೂರ ಅವರ ಮುನ್ನುಡಿ ಮತ್ತು ಬೆನ್ನುಡಿಗಳನ್ನು ಉತ್ತಮವಾಗಿ ಬರದಿದ್ದಾರೆ. ವಿಚಾರ ದೀಪ್ತಿಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳು ಜೀವಕ್ಕೆ ಜೀವವಾಗಿರುವ ಜೀವ ಜಲ ಉಳಿಸಿ ಎನ್ನುವದು ಜಾಗೃತಿಯ ಸಂಕೇತವಾಗಿದೆ. ಶರೀಫವರ ಪರಿಸರದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಧೂಮ್ರಪಾನವ ಬಿಡಿ ವಿದ್ಯಾಬುದ್ಧಿಯ ಸನ್ಮಾರ್ಗವ ಹಿಡಿ, ಕಾಡು ಬೆಳೆಸಿ ನಾಡು ಉಳಸಿ, ಕಪಟ ಮಾರ್ಗದಿಂದ ದೂರವಿರಿ, ಸರ್ವ ಧರ್ಮ ಸಮನ್ವಯತೆ ಸಾಧಿಸಿ, ಮಕ್ಕಳಿಗೆ ಓದಿಸಿ, ಮನುಷ್ಯನಾದ ಮೇಲೆ ಅನೇಕ ಕಾಯಿಲೆ, ಕಸಾಯಿ ಇದ್ದೆ ಇರುತ್ತದೆ. ಇದಕ್ಕೆ ಅಂಜದೆ ಜೀವರಕ್ಷಕ ವೈದ್ಯರನ್ನು ಕಾಣಿ ಕೊರೊನಾ ಸೇನಾನಿಗಳ ಮತ್ತು ಅವರ ನಿಸ್ವಾರ್ಥ ಸೇವೆ ಬಗ್ಗೆ ಸೊಗಸಾಗಿ ಬರದಿದ್ದಾರೆ.ಜನಸಂಖ್ಯೆ ನಿಯಂತ್ರಿಸಿ ಮುಂಬರುವ ಸಮಸ್ಯೆಗಳಿಗೆ ಕಾರಣೀಭೂತರಾಗದಿರಿ, ಶಿಕ್ಷಕರ ಸೇವೆ ಅಕ್ಷರ ಅಚ್ಚು ಹಾಕಿದ ಪರಿ. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಜೊತೆಗೆ ಸಂಸ್ಕಾರದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇವರ ಲೇಖನ ಕರೆ ಕೊಡುವಂತಿವೆ. ಶರೀಫ ಚಿಗಳ್ಳಿ ಇವರು ಸಮಾಜದಲ್ಲಿ ಬೇರು ಬಿಟ್ಟ ದರಿದ್ರ ಸಮಸ್ಯೆ, ಮೌಡ್ಯ, ಅನಭಿವೃದ್ಧಿ ಬೇರು ಸಮೇತ ಕಿತ್ತೆಸೆಯಬೇಕು. ಸಮಾಜದ ಒಳತಿಗಾಗಿ, ಪ್ರಗತಿಗಾಗಿ, ಬೆಳವಣಿಗೆಗಾಗಿ ಇಂತ ಉಪಯುಕ್ತ ಮಾಲಿಕೆ ಹೊರ ತಂದಿದ್ದು ಪ್ರಸ್ತುತ ಸಂದರ್ಭಕ್ಕೆ ಒಂದು ಕೈಗನ್ನಡಿಯಂತಾಗಿದೆ.

About the Author

ಶರೀಫ ಗಂಗಪ್ಪ ಚಿಗಳ್ಳಿ
(30 July 1985)

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ...

READ MORE

Related Books