ವಿಚಾರ ಕ್ರಾಂತಿಗೆ ಆಹ್ವಾನ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 102

₹ 90.00




Year of Publication: 2015
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ರಾಷ್ಟ್ರಕವಿ ಕುವೆಂಪು ಅವರ ಭಾಷಣಗಳು ಹಾಗೂ ಲೇಖನಗಳ ಸಂಕಲನ ’ವಿಚಾರ ಕ್ರಾಂತಿಗೆ ಆಹ್ವಾನ’.  ಈ ಸಂಕಲನದಲ್ಲಿ ಒಟ್ಟು ಹನ್ನೆರಡು  ಗದ್ಯ ಬರೆಹಗಳಿವೆ. ವಿಚಾರ ಕ್ರಾಂತಿಗೆ ಆಹ್ವಾನ, ಬರೆಯ ಬಯಸುವವರಿಗೆ ಒಂದು ಎಚ್ಚರಿಕೆ, ಸಾಹಿತ್ಯ ಚರಿತ್ರೆಕಾರರಿಗೆ ಸಲಹೆಗಳು, ಸಂಸ್ಕೃತಿ ಕ್ರಾಂತಿಗೆ  ಕಹಳೆ ನಾಂದಿ, ಕರ್ನಾಟಕ-ಇಟ್ಟ ಹೆಸರು ಕೊಟ್ಟ ಮಂತ್ರ, ಮಹಾಪುರುಷ ಶಿವಾನಂದರು, ಶ್ರೀ ರಾಮಕೃಷ್ಣರ ಕುರಿತು ಟಾಯ್ನಬಿ, ಶ್ರೀಸಾಮಾನ್ಯ ಮತ್ತು ವಿಚಾರಕ್ರಾಂತಿ, ಲಿಪಿ ಭಾಷೆ ಮತ್ತು ಭಾವೈಕ್ಯತೆ, ಪ್ರಶ್ನೆಗಳಿಗೆ ಉತ್ತರಗಳು, ಬಹುಭಾಷೆಗಳಲ್ಲಿ ದ್ವಿಭಾಷೆ, ಡಾ. ಉಪಾಧ್ಯೆ.

ಬಹುಜನಪ್ರಿಯ ’ವಿಚಾರ ಕ್ರಾಂತಿಗೆ ಆಹ್ವಾನ’ವು ಪುಟ್ಟಪ್ಪನವರು 1974ರ ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ ಭಾಷಣ. ಪುಟ್ಟಪ್ಪನವರ ವೈಚಾರಿಕ ನಿಲುವು- ಖಚಿತತೆಗಳು ಈ ಲೇಖನವು ಸೇರಿದಂತೆ ಸಂಕಲನದ ಉಳಿದ ಬರಹಗಳಲ್ಲಿಯೂ ಗೋಚರವಾಗುತ್ತವೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books