ವಿಚಾರವಾದಿ ಕುವೆಂಪು

Author : ಸುಜಾತ ಲಕ್ಷ್ಮೀಪುರ

Pages 124

₹ 150.00




Year of Publication: 2021
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.277, 5ನೇ ಕ್ರಾಸ್, ವಿಧಾನಸೌಧ ಎಕ್ಸ್ಟನ್, ಲಗ್ಗೆರೆ, ಬೆಂಗಳೂರು- 560058

Synopsys

‘ವಿಚಾರವಾದಿ ಕುವೆಂಪು’ ಡಾ. ಸುಜಾತ ಲಕ್ಷ್ಮೀಪುರ ಅವರು ರಚಿಸಿರುವ ಕೃತಿ. ಈ ಕೃತಿಗೆ ಡಾ. ಬೈರಮಂಗಲ ರಾಮೇಗೌಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಕುವೆಂಪು ಸಾಹಿತ್ಯ ಕುರಿತು ಅಧ್ಯಯನವನ್ನೋ ಸಂಶೋಧನೆಯನ್ನೋ ಮಾಡುವವರು ಸೌಲಭ್ಯಾಕಾಂಕ್ಷೆಯೇ ಪ್ರಧಾನವಾಗಿ ಕಾದಂಬರಿ, ಕಥೆ, ನಾಟಕ, ಪ್ರಬಂಧ, ಕಾವ್ಯ ಇವುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಕುವೆಂಪು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ವಿಚಾರ ಸಾಹಿತ್ಯ ಇವುಗಳನ್ನು ತೀರಾ ಅನಿವಾರ್ಯ ಎನಿಸಿದ ಸಂದರ್ಭದಲ್ಲಿ ಮಾತ್ರ ಗಮನಿಸಲಾಗುತ್ತದೆ. ಯಾಕೆಂದರೆ ಅವುಗಳ ಒಳಗೆ ಪ್ರವೇಶಿಸಲು ಒಂದು ಮನಸ್ಥಿತಿ ಬೇಕಾಗುತ್ತದೆಯಲ್ಲದೆ, ಮುಂದುವರೆದಂತೆ ಅಲ್ಲಿ ಕುವೆಂಪು ಹೇಳುವ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನವೂ ಬೇಕಾಗುತ್ತದೆ. ಅನೇಕರಿಗೆ ಕುವೆಂಪು ಕುರಿತು ನಾನೂ ಬರೆದಿದ್ದೇನೆ ಎನ್ನಿಸಿಕೊಳ್ಳುವುದು ಮುಖ್ಯವಾಗುತ್ತದೆಯೇ ಹೊರತು, ಏನು ಬರೆದೆ ಮತ್ತು ಹೇಗೆ ಬರೆದೆ ಎನ್ನುವುದು ಮುಖ್ಯವಾಗುವುದಿಲ್ಲ. ಇಂಥ ಸನ್ನಿವೇಶದಲ್ಲಿ ಡಾ. ಸುಜಾತ ಲಕ್ಷ್ಮೀಪುರ ವಿಚಾರವಾದಿಯಾಗಿ ಕುವೆಂಪು ಅವರನ್ನು ನೋಡಲು ಪ್ರಯತ್ನಿಸಿರುವುದು ಅಚ್ಚರಿಸನ್ನು ಉಂಟು ಮಾಡಿದರೂ ಆಸಕ್ತಿದಾಯಕವಾಗಿದೆ. ಕುವೆಂಪು ವೈಚಾರಿಕತೆಯನ್ನು ರೂಪಿಸಿದ ತಾತ್ವಿಕ ಸಂಗತಿಗಳಿಂದ ಹಿಡಿದು, ಕವಿತೆ, ನಾಟಕ, ಕಾದಂಬರಿ, ಮಹಾಕಾವ್ಯ ಮತ್ತು ವಿಚಾರ ಸಾಹಿತ್ಯ ಎಂದೇ ಗುರುತಿಸಬಹುದಾದ ಲೇಖನಗಳವರೆಗೆ ಕುವೆಂಪು ವ್ಯಕ್ತಿತ್ವ ಮತ್ತು ಚಿಂತನೆಯ ಒಂದು ಭಾಗವೇ ಆಗಿರುವ ವಿಚಾರವಾದ ಎಲ್ಲೆಲ್ಲಿ ಹೇಗೆ ಪ್ರವೇಶ ಪಡೆದುಕೊಂಡಿದೆ ಎನ್ನುವುದನ್ನು ಸುಜಾತ ಗುರುತಿಸಿದ್ದಾರೆ ಹಾಗೂ ಅದರ ಸ್ವರೂಪವನ್ನು ಅಧ್ಯಯನ ಮಾಡಿದ್ದಾರೆ. ಎಲ್ಲವನ್ನೂ ನಿಯಂತ್ರಿಸುವುದರಿಂದ ಹಿಡಿದು ಸದಾ ಒಂದಿಲ್ಲೊಂದು ಸಮಸ್ಯೆ ಸಂಕಟದಲ್ಲಿ ಒದ್ದಾಡುವ ಜನಸಾಮಾನ್ಯರವರೆಗೆ ವರ್ತಮಾನ ಮತ್ತು ಭವಿಷ್ಯದ ಬದಕಿನ್ನು ಹಸನು ಮಾಡಿಕೊಳ್ಳುವ ಉಪಾಯಗಳನ್ನು ಪ್ರಯೋಗಿಸುವ ಶಕ್ತಿಯನ್ನು ಕುವೆಂಪು ವಿಚಾರವಾದ ಹೇಗೆ ಒಳಗೊಂಡಿದೆ ಎಂದು ತಿಳಿಸುವುದರಲ್ಲೇ ಈ ಕೃತಿಯ ಮಹತ್ವ ಅಡಗಿದೆ ಎಂದು ಬೈರಮಂಗಲ ರಾಮೇಗೌಡ ಅವರು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಸುಜಾತ ಲಕ್ಷ್ಮೀಪುರ
(23 September 1975)

ಡಾ. ಸುಜಾತ ಲಕ್ಷ್ಮೀಪುರ  ಕನ್ನಡ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ತೃತೀಯ ರ್ಯಾಂಕ್ ನೊಂದಿಗೆ ಪಡೆದಿದ್ದಾರೆ. ಹದಿನೈದು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯಲ್ಲಿ ತೊಡಗಿಕೊಂಡಿರುವ ಅವರು ಅಧ್ಯಯನ ಮತ್ತು ಬರವಣಿಗೆಗಳನ್ನು ತಮ್ಮ ನೆಚ್ಚಿನ ಹವ್ಯಾಸಗಳನ್ನಾಗಿಸಿಕೊಂಡಿದ್ದಾರೆ. ಅವರ ಹಲವಾರು ಕವಿತೆಗಳು. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ವಿಚಾರ ಸಂಕೀರ್ಣಗಳಲ್ಲಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ. ನಿರೂಪಣೆ, ಹೀಗೆ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಹಳೆಗನ್ನಡ ಸಾಹಿತ್ಯದ ಅಧ್ಯಯನ ಶಿಬಿರ, ಸರ್ಟಿಫಿಕೇಟ್ ಆಧಾರಿತ ...

READ MORE

Related Books