ವಿಚಿತ್ರ ಸತ್ಯಗಳು ಕುತೂಹಲಕರ ಕತೆಗಳು

Author : ಜಿ.ವಿ. ಗಣೇಶಯ್ಯ

Pages 88

₹ 125.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 0802216 1900

Synopsys

ವ್ಯಂಗ್ಯಚಿತ್ರ ಕಲಾವಿದ ಹಾಗೂ ಲೇಖಕ ಜಿ.ವಿ. ಗಣೇಶಯ್ಯ ಅವರ ಕೃತಿ-ವಿಚಿತ್ರ ಸತ್ಯಗಳು, ಕುತೂಹಲಕರ ಕತೆಗಳು. ಕೃತಿಯ ಶೀರ್ವಿಷಿಕೆ ಸೂಚಿಸುವಂತೆ ಬೆರಗುಗೊಳಿಸುವ, ಕುತೂಹಲವನ್ನು ಕೆರಳಿಸುವ ಸಂಗತಿಗಳನ್ನು ಈ ಕೃತಿಯು ಒಳಗೊಂಡಿದೆ. ನಾವು ಕೇಳಿರುವ ಎಷ್ಟೋ ವಿಷಯಗಳ ಅವುಗಳ ಹಿಂದಿನ ಘಟನೆಗಳು, ಈಗ ಬಹಳ ಬಳಕೆಯಲ್ಲಿರುವ ಎಷ್ಟೋ ವಸ್ತುಗಳು ಆವಿಷ್ಕಾರದ ಬಗೆ, ಕೆಲವು ಆವಿಷ್ಕಾರಗಳು ಅಕಸ್ಮಾತ್ ಸಂಭವಿಸುವ ಬಗೆ ಇಂತಹ ಕುತೂಹಲಕರ ಸಂಗತಿಗಳು ಕೇವಲ ಮಕ್ಕಳಿಗೆ ಮಾತ್ರವಲ್ಲ; ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ದೊಡ್ಡವರಿಗೂ ಸಹ ಉಪಯುಕ್ತ ಕೃತಿ ಇದು.

 

About the Author

ಜಿ.ವಿ. ಗಣೇಶಯ್ಯ

ಲೇಖಕ, ವ್ಯಂಗ್ಯಚಿತ್ರಕಾರ  ಜಿ.ವಿ. ಗಣೇಶಯ್ಯ ಸದ್ಯ ಮೈಸೂರು ನಿವಾಸಿಗಳು. ಆದರೆ, ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪದ ಅಗಳಗಂಡಿ ಗ್ರಾಮದವರು. (ಜನನ: 1947ರಲ್ಲಿ)  ಹುಟ್ಟೂರಿನಲ್ಲಿ ಹತ್ತನೇ ತರಗತಿ ಮುಗಿಸಿದ ನಂತರ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರಕಲಾ ವ್ಯಾಸಂಗ ಹಾಗೂ ಸರ್ಕಾರಿ ಡಿಪ್ಲೊಮಾ ಪಡೆದರು. ಫೋಟೋಗ್ರಫಿ, ವ್ಯಂಗ್ಯ ಚಿತ್ರ ಕಲೆ,ಕರ್ನಾಟಕ ಸಂಗೀತ ಕಲಿತರು. ಮೈಸೂರಿನ ‘ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿ, 2007 ರಲ್ಲಿ ನಿವೃತ್ತರಾದರು. ವೈಚಾರಿಕ, ವೈಜ್ಞಾನಿಕ, ಆಧ್ಯಾತ್ಮ, ಯೋಗ,ಸಂಗೀತ, ಭಾಷೆ,  ಲಿಪಿ,ಚಿತ್ರಕಲೆ,ವ್ಯಕ್ತಿ ಚಿತ್ರ,ಪ್ರವಾಸ,ಚಾರಣ,ಯಕ್ಷಗಾನ- ಇತ್ಯಾದಿ  ವಿಚಾರಗಳಿಗೆ ಸಂಬಂಧಿಸಿ 300ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಇವರು ಉತ್ತಮ ಛಾಯಾಗ್ರಾಹಕರೂ ಹೌದು.  ಕೃತಿಗಳು:  ‘ಶಿಲ್ಪಿ ಸಿಂಗಣ್ಣಾಚಾರ್ಯ’, ...

READ MORE

Related Books