ವಿಕ್ಟೋರಿಯಾ ಗೌರಮ್ಮ

Author : ಡಿ.ಬಿ. ರಾಮಚಂದ್ರಚಾರ್

Pages 208

₹ 150.00




Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ವಿಕ್ಟೋರಿಯಾ ಗೌರಮ್ಮ’ ಕೃತಿಯು ಸಿ.ಪಿ ಬೆಳ್ಳಿಯಪ್ಪ ಅವರ ಮೂಲ ಕೃತಿಯಾಗಿದ್ದು, ಡಿ. ಬಿ. ರಾಮಚಂದ್ರಾಚಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಳೆದು ಹೋದ ಕೊಡಗಿನ ಗೌರಮ್ಮನ ಕುರಿತ ವಿಚಾರವನ್ನು ಈ ಕೃತಿಯು ಪ್ರಸ್ತುತ ಪಡಿಸುತ್ತದೆ. ಚಿಕ್ಕವೀರ ರಾಜೇಂದ್ರ ಕೊಡಗನ್ನು ಆಳಿದ ಕೊನೆಯ ಅರಸ. ಈಸ್ಟ್ ಇಂಡಿಯಾ ಕಂಪನಿಗೆ ರಾಜ್ಯವನ್ನು ಕಳೆದುಕೊಂಡು ವಾರಣಾಸಿಯಲ್ಲಿ ಗೃಹಬಂಧನದಲ್ಲಿರ ಬೇಕಾಗುತ್ತದೆ.

ಮಗಳು ಗೌರಮ್ಮನಿಗೆ ಹೆಚ್ಚಿನ ವಿದ್ಯಾಭ್ಯಾಸ ಕ್ರೈಸ್ತ ಧರ್ಮ ದೀಕ್ಷೆ ಕೊಡಿಸುವ ನೆಪಮಾಡಿಕೊಂಡು 1852ರಲ್ಲಿ ಇಂಗ್ಲೆಂಡ್ ಸೇರುವ ರಾಜ ಹಾಗೂ ಅವನ ಮಗಳ ದಾರುಣ ಚಿತ್ರಣ ಈ ಕೃತಿಯಲ್ಲಿದೆ. 19ನೇ ಶತಮಾನದ ಇತಿಹಾಸದ ಒಂದು ಮಜಲನ್ನು ಸಾಕಷ್ಟು ಚಾರಿತ್ರಿಕ ದಾಖಲೆಗಳ ಮೂಲಕ ಬೆಳ್ಳಿಯಪ್ಪನವರು ಇಲ್ಲಿ ಮರು ಸೃಷ್ಟಿಸಿದ್ದಾರೆ. ಇತಿಹಾಸದ ಕೃತಿಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುವುದು ಇದರ ಹೆಗ್ಗಳಿಕೆ. 

About the Author

ಡಿ.ಬಿ. ರಾಮಚಂದ್ರಚಾರ್

ಲೇಖಕ ಡಿ.ಬಿ. ರಾಮಚಂದ್ರಚಾರ್ ಅನೇಕ ಕೃತಿಗಳನ್ನು ಕನ್ನಡಾನುವಾದ ಮಾಡಿದ್ದಾರೆ. ಅದರಲ್ಲಿ ಸಿ. ಪಿ. ಬೆಳ್ಳಿಯಪ್ಪ ಅವರ ‘ವಿಕ್ಟೋರಿಯಾ ಗೌರಮ್ಮ’ ಕೃತಿಯು ಒಂದು. ಈ ಕೃತಿಯು ಕೊಡಗಿನ ಧೀರ ಮಹಿಳೆಯ ಕಥಾನಕವನ್ನು ತಿಳಿಸುತ್ತದೆ. ಕೃತಿಗಳು: ವಿಕ್ಟೋರಿಯಾ ಗೌರಮ್ಮ, ಗುರುನಾನಕ್ ...

READ MORE

Related Books