ವಿದೇಶ ಪ್ರವಾಸ

Author : ಆರ್‍ಯಾಂಬ ಪಟ್ಟಾಭಿ

Pages 103

₹ 99.00

Synopsys

ಲೇಖಕಿ ಆರ್‍ಯಾಂಬ ಪಟ್ಟಾಭಿ ಅವರ ಕೃತಿ ವಿದೇಶ ಪ್ರವಾಸ. ಕೃತಿಯ ಕುರಿತು ಲೇಖಕಿಯೇ ಹೇಳಿಕೊಳ್ಳುವಂತೆ, ವಿದೇಶಗಳಿಗೆ ಭಾರತದಿಂದ ಪ್ರತಿವರ್ಷ ಹೋಗಿ ಬರುವವರ ಸಂಖ್ಯೆ ಬೆಳೆಯುತ್ತಿದೆ. ಪ್ರವಾಸ ಮಾಡಿ ಬಂದವರಲ್ಲಿ ಕೆಲವರು ಅಲ್ಲಿ ಕಂಡ ಪ್ರೇಕ್ಷಣೀಯ ಸ್ಥಳ ಹಾಗೂ ಅನುಭವಗಳನ್ನು ಕುರಿತು ಬರೆದಿದ್ದಾರೆ. ಅನೇಕ ಭಾರತೀಯರು ವಿದೇಶಗಳಲ್ಲೇ ಶಾಶ್ವತವಾಗಿ ನೆಲಸಿ ಸುಖಜೀವನ ನಡೆಸುತ್ತಿದ್ದಾರೆ. ಅಲ್ಲಿಯ ಪ್ರಜೆಗಳೆನಿಸಿಕೊಂಡಿದ್ದರೂ ಮಾತೃ ದೇಶದ ಸಂಸ್ಕೃತಿಯನ್ನು ಮರೆಯದೆ ಕೆಲವರಾದರೂ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದು ಸಮಾಧಾನಕರವಾದ ವಿಚಾರ,ಕೆಲವು ದಿನಗಳ ಅಥವಾ ವಾರಗಳ ಅವಸರದ ವಿದೇಶ ಪ್ರವಾಸ ನನ್ನದಲ್ಲ. ಯಾಕೆಂದರೆ ಮೂರು ಸಲ ಪ್ರವಾಸ ಮಾಡಿ ಒಟ್ಟಾರೆ ಎರಡು ವರ್ಷ ಅಮೆರಿಕ ದೇಶದಲ್ಲಿ ವಾಸವಾಗಿದ್ದು ಭಾರತಕ್ಕೆ ಹಿಂತಿರುಗಿದ ಮೇಲೆ ನನಗುಂಟಾದ ಅನುಭವದ ಸಂಪತ್ತು ವಿಶಾಲ ಮತ್ತು ವಿಪುಲ, ತೆರೆದ ಕಣ್ಣು, ತೆರೆದ ಕಿವಿ ಮತ್ತು ವಿಶಾಲ ಮನೋಧರ್ಮದಿಂದ ಪ್ರವಾಸ ಮಾಡಿ ಅಧ್ಯಯನ ನಡೆಸಿದ್ದೇನೆ. ಪ್ರವಾಸದ ಅನುಭವಗಳಿಂದ ಸೃಷ್ಟಿ ಯಾದ ಹೊಸ ದೃಷ್ಟಿ, ಮನಸ್ಸಿಗುಂಟಾದ ನೂತನ ಸಂಸ್ಕಾರಗಳ ಫಲ ವಾಗಿ ಹುಟ್ಟಿದ ಹೊಸ ವಿಚಾರಗಳು, ಪರಿಷ್ಕಾರಗಳಿಂದಾಗಿ ಬಹಳ ವರ್ಷ ಗಳಿಂದ ನಂಬಿದ್ದ ಕೆಲವು ಬದುಕಿನ ಮೌಲ್ಯಗಳು ಬದಲಾವಣೆ ಹೊಂದಿ ನಾನು ಹಿಂದಿನವಳಾಗಿ ಉಳಿಯದೆ ಹೊಸತನದ ಬೌದ್ಧಿಕತೆಯಲ್ಲಿ ಅಭಿವ್ಯಕ್ತಗೊಂಡಿದ್ದೀನಿ ಎಂದು ಹೇಳ ಬಯಸುತ್ತೇನೆ. ಪ್ರವಾಸ ನನ್ನ ಅಂತರಂಗದ ಭೂಪಟದ ಮೇಲೆ ಬಲವಾದ ಮುದ್ರೆಯನ್ನೊತ್ತಿತಲ್ಲದೆ ಅದರ ಬಗ್ಗೆ ಇತರರಿಗೂ ತಿಳಿಸಬೇಕೆಂಬ ಅಪೇಕ್ಷೆಯುಂಟಾಯಿತು. ಅದರ ಪರಿಣಾಮವಾಗಿ ಈ ಕೃತಿ ನನ್ನಿಂದ ರಚನೆಯಾಯಿತು ಎನ್ನಬಹುದು ಎಂಬುದಾಗಿ ತಿಳಿಸಿದ್ದಾರೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books