ವಿದ್ಯಾರಣ್ಯರು

Author : ಕೊರಟಿ ಶ್ರೀನಿವಾಸರಾವ್

Pages 120

₹ 15.00




Year of Publication: 1978
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ವಿದ್ಯಾರಣ್ಯರು ಜೀವನಚರಿತ್ರೆಯಾಗಿದೆ. ಕರ್ನಾಟಕ ಸಿಂಹಾಸನ ಸಂಸ್ಥಾಪನಾಚಾರ್ಯರೆಂದು ಪ್ರಸಿದ್ಧರಾದ ತಪೋಧನರು. ಕನ್ನಡಿಗರು ಹತಾಶರಾಗಿದ್ದ ಕಾಲದಲ್ಲಿ ಅವರಿಗೆ ಧೈರ್ಯವನ್ನು ತಂದುಕೊಟ್ಟು ಹಕ್ಕಬುಕ್ಕರಿಗೆ ಸ್ಫೂರ್ತಿಯಾದರು. ಶೃಂಗೇರಿಯ ಶಾರದಾ ಪೀಠವನ್ನು ಅಲಂಕರಿಸಿದರು. ತಮ್ಮ ತಪಸ್ಸನ್ನೆಲ್ಲ ವಿಜಯನಗರಕ್ಕೆ ಧಾರೆ ಎರೆದರು ಎಂದು ವಿದ್ಯಾರಣ್ಯರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಅವರ ಬಾಲ್ಯ ಜೀವನ, ಬದುಕಿನ ಮಹತ್ವದ ಘಟ್ಟಗಳು, ಬದುಕಿನ ತಿರುವು ಇವಲ್ಲವನ್ನೂ ಲೇಖಕರು ಚಿತ್ರಿಸಿದ್ದಾರೆ.

About the Author

ಕೊರಟಿ ಶ್ರೀನಿವಾಸರಾವ್
(19 October 1925 - 25 April 1983)

ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...

READ MORE

Related Books